Sunday, December 29, 2024

ಬಿಜೆಪಿ ಹೀನಾಯ ಸೋಲಿಗೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಕಾರಣ : ಯತ್ನಾಳ್​

ಚಿಕ್ಕೋಡಿ : ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ  ಚುನಾವಣೆ ಪಲಿತಾಂಶದ ಬಗ್ಗೆ ಹೇಳಿಕೆ ನೀಡಿದ್ದು. ರಾಜ್ಯಧ್ಯಕ್ಷ ವಿಜಯೇಂದ್ರ ಮತ್ತು ಅವರ ನಾಯಕತ್ವದ ವಿರುದ್ದ ಹರಿಹಾಯ್ದಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಯತ್ನಳ್​ ‘ಮೂರು ಮತಕ್ಷೇತ್ರದಲ್ಲಿ ಬಿಜೆಪಿಗೆ ಸೋಲಾದ ಬಗ್ಗೆ ರಾಜ್ಯಾಧ್ಯಕ್ಷರಿಗೆ ಪ್ರಶ್ನೆ ಕೇಳ್ರೀ. ಅವರ ನಾಯಕತ್ವ ಜನರು ಒಪ್ಪಿದ್ದಾರೋ ಇಲ್ಲವೋ ಅವರಿಗೆ ಗೊತ್ತು. ವಿಜಯೇಂದ್ರ ನಿನ್ನೆ ದೆಹಲಿಯಲ್ಲಿ ಹೇಳಿದ್ದ ಬಿಜೆಪಿಯಲ್ಲಿ ಎಲ್ಲಾ ಬಾಗಿಲು ಬಂದಾಗಿ, ಒಂದೇ ಬಾಗಿಲು ಇರುತ್ತೆ ಅಂತಾ. ಎಲ್ಲಾ ಬಾಗಿಲು ಬಂದಾಗಿ ಇಂದು ಬಿಜೆಪಿ ಗೆ ಇಂತಹ ಹೀನಾಯ ಸೋಲಾಗಿದೆ. ಇದರ ನಮಗೂ ದುಃಖವಿದೆ.ಅವರ ಒಳ ಒಪ್ಪಂದದಿಂದ ಬಿಜೆಪಿಗೆ ಇಂತಹ ದುಸ್ಥಿತಿ ಬರ್ತಿದೆ. ಹೈಕಮಾಂಡ್ ರಾಜ್ಯಕ್ಕೆ ಉಸ್ತುವಾರಿಗಳನ್ನು ನೇಮಿಸುವಾಗ ಪ್ರಾಮಾಣಿಕರು, ಸಂಸ್ಕಾರ ಇದ್ದವರನ್ನು ನೇಮಿಸಲಿ. ಈ ಹಿಂದೆ ಅರುಣಸಿಂಗ್ ಅಂತಾ ಇದ್ದವನು.ಯಡಿಯೂರಪ್ಪ, ವಿಜಯೇಂದ್ರ ಸಂದೇಶಕಾರಕನಾಗಿ ಕೆಲಸ ಮಾಡಿದ ಪರಿಣಾಮ. ಇಂದು ನಮಗೆ ಇಂತಹ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಪಕ್ಷದ ಹೈಕಮಾಂಡ್ ಪೂಜ್ಯ ತಂದೆ, ಮಗನ ವ್ಯಾಮೋಹ ಬಿಡಬೇಕು ಅಂತಾ ವಿನಂತಿ ಮಾಡ್ತಿನಿ’ ಎಂದು ಹೇಳಿದರು.

ವಕ್ಫ್​ ವಿಚಾರದ ಬಗ್ಗೆ ಯತ್ನಾಳ್​ ಮಾತು!

ವಕ್ಫ ಬೋರ್ಡ್ ಚುನಾವಣೆಯಲ್ಲಿ ವರ್ಕೌಟ್ ಆಗಲಿಲ್ಲವಾ ಪ್ರಶ್ನೆಗೆ ಉತ್ತರಿಸಿದ ಯತ್ನಾಳ್​ ‘ ವಕ್ಫ್ ಬೋರ್ಡ್ ವಿರುದ್ದದ ಫ್ರತಿಭಟನೆ ಇವಾಗ ಆರಂಭವಾಗಿದೆ, ಇದರ ಬಗ್ಗೆ ಜನರಿಗೆ ಗೊತ್ತಗಬೇಕಿದೆ. ಅದೇ ಮಹಾರಾಷ್ಟ್ರದಲ್ಲಿ ವಕ್ಫ್ ಬೋರ್ಡ ವಿಚಾರವಾಗಿಯೇ ಚುನಾವಣೆ ಮಾಡಿದೆವು ಅಲ್ಲಿ ಗೆದ್ದಿದ್ದೇವೆ. ಉದ್ಭವ ಠಾಕ್ರೆ ಔರಂಗಜೇಬ್ ಸಮಾಧಿಗೆ ಹೋಗಿ ನಮಸ್ಕಾರ ಮಾಡಿದ್ರು. ಅದಕ್ಕೆ ಉದ್ಭವ ಠಾಕ್ರೆಯನ್ನು ಮಹಾರಾಷ್ಟ್ರ ಜನರು ಮುಳುಗಿಸಿದ್ರು.
ಕರ್ನಾಟಕದಲ್ಲಿ ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ ಎಂದು ಯತ್ನಾಳ ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES