Saturday, January 11, 2025

ಶಿರಾಡಿ ಘಾಟ್​​ನಲ್ಲಿ ಸರಣಿ ಅಪಘಾತ: ಪ್ರವಾಸಕ್ಕೆ ತೆರಳಿದ್ದ 20 ಕ್ಕೂ ಹೆಚ್ಚು ವಿಧ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

ಮಂಗಳೂರು : ಶಿರಾಡಿ ಘಾಟಿಯಲ್ಲಿ ನಸುಕಿನ ಜಾವ ಸರಣಿ ಅಪಘಾತವಾಗಿದ್ದು. ಇಪ್ಪತ್ತಕ್ಕೂ ಹೆಚ್ಚು ಮಂದಿಗೆ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮಾಹಿತಿ ದೊರೆತಿದೆ. ಸ್ಥಳಕ್ಕೆ ನೆಲ್ಯಾಡಿ ಫೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಮಾಹಿತಿ ದೊರೆತಿದೆ.

ಮಂಗಳೂರು- ಬೆಂಗಳೂರು ಹೆದ್ದಾರಿಯ ಶಿರಾಡಿ ಘಾಟಿಯ ಅಡ್ಡಹೊಳೆ ಎಂಬಲ್ಲಿ ಘಟನೆ ನಡೆದಿದ್ದು, KSRTC ಬಸ್​, ಖಾಸಗಿ ಬಸ್​​ ಮತ್ತು ಕಾರಿನ ನಡುವೆ ಸರಣಿ ಅಪಘಾತವಾಗಿದೆ. ಖಾಸಗಿ ಬಸ್​​ನಲ್ಲಿ ಮಂಗಳೂರಿಗೆ ಪ್ರವಾಸಕ್ಕೆ ಹೋಗಿ ಹಿಂತಿರುಗುತ್ತಿದ್ದ ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳ ಬಸ್​ಗೆ ಅಪಘಾತವಾಗಿದ್ದು, ಚಾಲಕನ ನಿಯತ್ರಂಣ ತಪ್ಪಿ ಬಸ್​ ಪಲ್ಟಿಯಾಗಿದೆ ಎಂದು ಮಾಹಿತಿ ದೊರೆತಿದೆ.

ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್‌ ಪಲ್ಟಿಯಾಗಿ ಕೆಎಸ್ಸಾರ್ಟಿಸಿ ಬಸ್ ಗೆ ಡಿಕ್ಕಿ ಹೊಡೆದಿದ್ದು. ಹಿಂದಿನಿಂದ ಬರುತ್ತಿದ್ದ ಕಾರು KSRTC ಬಸ್​ಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಮಂದಿಗೆ ಗಾಯವಾಗಿದ್ದು ಗಾಯಾಳುಗಳನ್ನು ‘ನೆಲ್ಯಾಡಿ ಮತ್ತು ಕಡಬದ ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡಿದ್ದಾರೆ. ಗಂಭೀರವಾಗಿ ಗಾಯವಾಗಿದ್ದ ಕೆಲವರನ್ನು ಪುತ್ತೂರಿನ ಆಸ್ಪತ್ರೆಗೆ  ದಾಖಲು ಮಾಡಿದ್ದಾರೆ  ಎ

RELATED ARTICLES

Related Articles

TRENDING ARTICLES