Sunday, December 29, 2024

ಮಹಾಯುತಿಗೆ ಮಹರಾಷ್ಟ್ರ : ಸಿಎಂ ಸ್ಥಾನಕ್ಕಾಗಿ ನಡೆಯಲಿದೆಯ ಮತ್ತೊಂದು ಯುದ್ದ

ಮುಂಬೈ : ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮಹಾಯುತಿ ನಿರೀಕ್ಷೆಯೇ ಮಾಡದಷ್ಟು ಮುನ್ನಡೆಯನ್ನು ಕಂಡಿದೆ, ಆದರೆ ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎನ್ನುವುದೇ ಸದ್ಯದ ದೊಡ್ಡ ಪ್ರಶ್ನೆ. ಮೂಲಗಳ ಪ್ರಕಾರ ಹೊಸ ಸರ್ಕಾರ ನವೆಂಬರ್‌ 26 ರಂದು ಅಧಿಕಾರ ವಹಿಸಿಕೊಳ್ಳಲಿದೆ. ಮತದಾರರ ಮನಗೆದ್ದಿರುವ ಏಕನಾಥ್ ಶಿಂಧೆ ಅವರನ್ನು ಸಿಎಂ ಆಗಿ ಉಳಿಸಿಕೊಳ್ಳುವುದೇ ಅಥವಾ ಬಿಜೆಪಿಯ ಅಮೋಘ ಸಾಧನೆಗೆ ಕಾರಣರಾದ ದೇವೇಂದ್ರ ಫಡ್ನವೀಸ್ ಅವರನ್ನು ಮುಖ್ಯಮಂತ್ರಿ ಮಾಡಲಿದೆಯೇ ಎನ್ನುವುದು ಮಹಾಯುತಿ ಮುಂದಿರುವ ಯಕ್ಷ ಪ್ರಶ್ನೆಯಾಗಿದೆ.

ಕೇವಲ ಐದು ತಿಂಗಳ ಹಿಂದಿನ ಮಾತು. ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಎನ್‌ಡಿಎ ಮುಗ್ಗರಿಸಿ ಬಿದ್ದಿತ್ತು. ಇದು ರಾಷ್ಟ್ರಮಟ್ಟದಲ್ಲೂ ಬಿಜೆಪಿಯ ಹಿನ್ನಡೆಗೆ ಕಾರಣವಾಯ್ತು. ಈ ಹಂತದಲ್ಲಿ ಬಿಜೆಪಿ ನಾಯಕ ಹಾಗೂ ಮಹಾರಾಷ್ಟ್ರದ ಡಿಸಿಎಂ ಆಗಿದ್ದ ದೇವೇಂದ್ರ ಫಡ್ನವಿಸ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ಅದರೊಂದಿಗೆ ಅವರು ‘ಮಹಾರಾಷ್ಟ್ರ ರಾಜಕಾರಣದಲ್ಲಿ ಮೂರು ತಿಂಗಳು ಅನ್ನೋದು ಬಹಳ ದೊಡ್ಡ ಸಮಯ’ ಎಂದಿದ್ದರು. ಅವರ ಮಾತಿನ ಅರ್ಥ, ವಿಧಾನಸಭೆ ಚುನಾವಣೆಯಲ್ಲಿ ಟ್ರೆಂಡ್‌ ಬದಲಾಗಲಿದೆ ಎನ್ನುವುದಾಗಿತ್ತು. ಅದರಂತೆ, ನವೆಂಬರ್‌ನಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಒಕ್ಕೂಟ ವಿಧಾನಸಭೆ ಚುನಾವಣೆಯಲ್ಲಿ ಕ್ಲೀನ್‌ಸ್ವೀಪ್‌ ಮಾಡಲು ಅವರೇ ಮುಖ್ಯ ಕಾರಣರಾಗಿದ್ದಾರೆ. ಇನ್ನೊಂದೆಡೆ ಶಿವಸೇನೆ(ಏಕನಾಥ್‌) ಪಕ್ಷದ ನಾಯಕರಾಗಿದ್ದ ಏಕನಾಥ್‌ ಶಿಂಧೆ ಮಹಾರಾಷ್ಟ್ರದ ಸಿಎಂ ಆಗಿದ್ದಾರೆ. ಇವರಿಬ್ಬರಲ್ಲಿ ಮಹಾರಾಷ್ಟ್ರದ ಸಿಎಂ ಆಗಿ ಮಹಾಯುತಿ ಯಾರನ್ನು ಆಯ್ಕೆ ಮಾಡ್ತಾರೆ ಅನ್ನೋದೇ ಈಗ ಮೈತ್ರಿಕೂಟದ ಮುಂದಿರುವ ದೊಡ್ಡ ಪ್ರಶ್ನೆಯಾಗಿದೆ.

 

RELATED ARTICLES

Related Articles

TRENDING ARTICLES