Monday, February 24, 2025

ಮಹರಾಷ್ಟ್ರ ಚುನಾವಣೆ : 56 ಲಕ್ಷ ಫಾಲೋವರ್ಸ್​ ಹೊಂದಿದ್ದ ನಟ ಗಳಿಸಿದ್ದು ಕೇವಲ 137 ಮತ

ಮುಂಬೈ : ಮಹಾರಾಷ್ಟ್ರ ಚುನಾವಣೆಯಲ್ಲಿ ನಟ ಆಜಾಜ್ ಖಾನ್‌ಗೆ ಮುಖಭಂಗವಾಗಿದ್ದು. ಸಾಮಾಜಿಕ ಮಾಧ್ಯಮ, ಜನಪ್ರಿಯತೆ ಹಾಗೂ ಚುನಾವಣಾ ರಾಜಕಾರಣ. ಇವುಗಳ ನಡುವೆ ವಿರೋಧಾಬಾಸಗಳನ್ನು ಸಾಕಷ್ಟು ಬಾರಿ ನೋಡಿದ್ದೇವೆ. ಇದಕ್ಕೆ ತಾಜಾ ಉದಾಹರಣೆ ಮಹಾರಾಷ್ಟ್ರ ಚುನಾವಣೆಯ ಈ ಒಂದು ಕ್ಷೇತ್ರದ ಫಲಿತಾಂಶ.

ಈ ಭಾರಿಯ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ವರಸೋವಾ ಕ್ಷೇತ್ರದಿಂದ ನಟ ಅಜಾಜ್ ಖಾನ್ ಎನ್ನುವರು ಸಂಸದ ಚಂದ್ರಶೇಖ‌ರ್ ಆಜಾದ್ ರಾವಣ ಅವರ ‘ಆಜಾದ್ ಸಮಾಜ್ ಪಾರ್ಟಿ’ಯಿಂದ ಸ್ಪರ್ಧಿಸಿದ್ದರು. ಸಾಕಷ್ಟು ಪ್ರಚಾರ ಮಾಡಿದ್ದರು. ವಿಶೇಷವೆಂದರೆ ನಟ ಆಜಾಜ್‌ಗೆ ಇನ್‌ಸ್ಟಾಗ್ರಾಂನಲ್ಲಿ 56 ಲಕ್ಷ (5.6M) ಫಾಲೋವರ್‌ಗಳಿದ್ದಾರೆ.

ಆದರೆ, ವಿಚಿತ್ರವೆಂದರೆ ಇಂದು ಪ್ರಕಟವಾದ ಮಹಾರಾಷ್ಟ್ರ ಚುನಾವಣಾ ಫಲಿತಾಂಶದಲ್ಲಿ ಅಜಾಜ್ ಅವರು ಕೇವಲ 139 ಮತಗಳನ್ನು ಪಡೆದಿದ್ದಾರೆ. ಫೇಸ್‌ಬುಕ್, ಎಕ್ಸ್ ಹಾಗೂ ಇತರ ಸಾಮಾಜಿಕ ಜಾಲತಾಣಗಲ್ಲಿಯೂ ಅವರು ಲಕ್ಷಾಂತರ ಫಾಲೋವರ್‌ಗಳನ್ನು ಹೊಂದಿದ್ದಾರೆ. ಅವರ ಜನಪ್ರಿಯತೆ ಚುನಾವಣೆಯಲ್ಲಿ ಲೆಕ್ಕಕ್ಕೆ ಬಂದಿಲ್ಲ. ಇದರಿಂದ ಆ ನಟ ಸಾಕಷ್ಟು ಮುಜುಗರಕ್ಕೆ ಒಳಗಾಗಿದ್ದಾರೆ.

RELATED ARTICLES

Related Articles

TRENDING ARTICLES