ರಾಮನಗರ : ರಾಜ್ಯದ ಉಪಚುನಾವಣೆ ಫಲಿತಾಂಶ ಹೊರಬಂದಿದ್ದು. ಮೂರಕ್ಕೆ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ಮೂರು ಕ್ಷೇತ್ರಗಳಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಚನ್ನಪಟ್ಟಣದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು. ಜಮೀರ್ ಅಹಮದ್ ಖಾನ್ ಚುನಾವಣೆ ಸಂಧರ್ಭದಲ್ಲಿ ಕುಮಾರಸ್ವಾಮಿ ವಿರುದ್ದ ನೀಡಿದ್ದ ಅವಹೇಳನಕಾರಿ ಹೇಳಿಕೆಯಿಂದ ಚುನಾವಣೆ ಮೇಲೆ ಯಾವುದೇ ಪರಿಣಾಮವಾಗಿಲ್ಲ ಎಂಬುದು ಸಾಬೀತಾಗಿದೆ.
ಚುನಾವಣೆ ಪ್ರಚಾರದ ವೇಳೆ ಜಮೀರ್ ಅಹಮದ್ ನೀಡಿದ್ದ ‘ಕರಿಯಾ ಕುಮಾರಸ್ವಾಮಿ’ ಹೇಳಿಕೆ ಸಿ.ಪಿ ಯೋಗೇಶ್ವರ್ಗೆ ಚುನಾವಣೆಯಲ್ಲಿ ಪೆಟ್ಟು ಕೊಡುತ್ತೆ ಎಂದು ವಿಶ್ಲೇಷಣೆ ಮಾಡಲಾಗಿತ್ತು ಮತ್ತು ಜಮೀರ್ ಹೇಳಿಕೆಯ ವಿರುದ್ದ ರಾಜ್ಯ ಒಕ್ಕಲಿಗರ ಸಂಘ ಮತ್ತು ರಾಜ್ಯ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕೂಡ ಹೋರಾಟ ನಡೆಸಿದ್ದರು. ಇವೆಲ್ಲಾ ಕಾರಣಗಳಿಂದ ಸಿಪಿ ಯೋಗೇಶ್ವರ್ ಸೋಲುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಎಲ್ಲಾ ವಿಶ್ಲೇಷಣೆಗಳು ತಲೆಕೆಳಗಾಗಿದ್ದು. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ.
ಉಪಚುನಾವಣೆಯ ಫಲಿತಾಂಶದಿಂದ ಜಮೀರ್ ಅಹಮದ್ ಖಾನ್ ರೀಲಿಫ್ ಆಗಿದ್ದು. ಒಂದು ವೇಳೆ ಚನ್ನಪಟ್ಟಣದಲ್ಲಿ ಸಿಪಿವೈ ಸೋತಿದ್ದರೆ ಅದಕ್ಕೆ ಕಾರಣ ಜಮೀರ್ ನೀಡಿದ್ದ ಹೇಳಿಕೆ ಎಂದು ವಿಶ್ಲೇಷಣೆ ನಡೆಸಲಾಗಿತ್ತು ಮತ್ತು ಪಕ್ಷಕ್ಕೆ ಮುಜುಗರ ತಂದ ಜಮೀರ್ರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂಬ ಆಗ್ರಹಗಳು ಕೇಲಿಬರುತ್ತಿದ್ದವು. ಇದರ ಮಧ್ಯ ಚುನಾವಣೆಯ ಫಲಿತಾಂಶ ಜಮೀರ್ ಅಹಮದ್ ಖಾನ್ಗೆ ಒಂದು ರೀತಿಯ ನಿರಾಳತೆಯನ್ನು ಉಂಟು ಮಾಡಿದೆ ಎಂದು ತಿಳಿಯಬಹುದಾಗಿದೆ.