Wednesday, January 22, 2025

ಕದ್ದ ಚಿನ್ನಾಭರಣಗಳನ್ನ ವಾಪಸ್ ತಂದಿಟ್ಟ ಖತರ್ನಾಕ್ ಕಳ್ಳ!

ಮಂಡ್ಯ : ಸಾಮಾನ್ಯವಾಗಿ ಕಳ್ಳತನ ಮಾಡಿದವರು ಪೋಲಿಸರಿಗೆ ಸಿಗದ ಹಾಗೆ ಓಡಿ ಹೋಗುವುದನ್ನು ನೋಡಿರುತ್ತೇವೆ. ಸಿಕ್ಕಿದ್ದೆ ಸಾಕು ಎನ್ನುವ ತೃಪ್ತ ಕಳ್ಳರನ್ನು ನೋಡಿರುತ್ತವೆ. ಆದರೆ ಇಲ್ಲೊಬ್ಬ ಕಳ್ಳ ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ಕಳ್ಳತನ ಮಾಡಿ ನಂತರ ಎಲ್ಲಿ ಪೋಲಿಸರಿಗೆ ಸಿಕ್ಕಿಬೀಳುತ್ತೇನೆ ಎಂಬ ಭಯದಲ್ಲಿ ಮತ್ತೆ ಚಿನ್ನಭರಣವನ್ನು ತಂದು ಮನೆಯ ಬಳಿ ಇಟ್ಟು ಹೋಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

ಮಂಡ್ಯ ತಾಲ್ಲೂಕಿನ, ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು. ಎರಡು ದಿನದ ಹಿಂದೆ ಗ್ರಾಮದ ಸಿದ್ದೇಗೌಡ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಹೆಂಚು ತೆಗೆದು ಮನೆ ಒಳಗೆ ನುಗ್ಗಿದ್ದ ಕಳ್ಳ  ಸುಮಾರು 75 ಗ್ರಾಂನಷ್ಟು ಚಿನ್ನದ ಆಭರಣವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದನು ಮತ್ತು ಚಿನ್ನವನ್ನು ಕಳೆದುಕೊಂಡವರು ಕೂಡ ಪೋಲಿಸ್ ​​ಠಾಣೆಯಲ್ಲಿ ದೂರು ನೀಡಿದ್ದರು.

ದೂರು ಹಿನ್ನಲೆ ಪೋಲಿಸರು ಕಳ್ಳನನ್ನು ಹುಡುಕುಲು ತೀವ್ರ ತನಿಖೆ ಆರಂಭಿಸಿದ ಹಿನ್ನಲೆ. ಇಂದು ಬೆಳಿಗ್ಗೆ (ನ.22) ಮನೆಯ ಮುಂಭಾಗದ ಜಗುಲಿಯ ಮೇಲೆ ಚಿನ್ನಾಭರಣಗಳು ಪತ್ತಯಾಗಿದ್ದು. ಬಂಧನದ ಭೀತಿಯಿಂದ ಕಳ್ಳನೆ ಚಿನ್ನವನ್ನು ತಂದು ವಾಪಾಸ್​​ ಇಟ್ಟಿದ್ದನು ಎಂದು ಶಂಕೆ ಮಾಡಲಾಗಿದೆ.

 

RELATED ARTICLES

Related Articles

TRENDING ARTICLES