ಬೆಂಗಳೂರು : ಭಾರೀ ಕುತೂಹಲ ಕೆರೆಳಿಸಿರುವ ಚುನಾವಣೆಯ ಫಲಿತಾಂಶ ನಾಳೆ ಹೊರಬರಲಿದ್ದು. ರಾಜ್ಯದ ಮೂರು ಕ್ಷೇತ್ರಗಳ ಜೊತೆ ಮಹರಾಷ್ಟ್ರ ಮತ್ತು ಜಾರ್ಖಂಡ್ ಚುನಾವಣೆಯ ಫಲಿತಾಂಶವು ಕೂಡ ನಾಳೆ ಬರಲಿದೆ.
ರಾಷ್ಟ್ರದ ಚಿತ್ತ, ಮಹರಾಷ್ಟ್ರದತ್ತ !
ಇಡೀ ರಾಷ್ಟ್ರದ ಗಮನ ಮಹರಾಷ್ಟ್ರದ ಮೇಲೆ ಇದ್ದು. ಬಿಜೆಪಿ ನೇತೃತ್ವದ ‘ಮಹಾಯುತಿ’ ಮತ್ತು ಕಾಂಗ್ರೆಸ್ ನೇತೃತ್ವದ ‘ಮಹಾವಿಕಾಸ್ ಆಘಾಡಿಯ’ ನಡುವೆ ಭಾರೀ ಕದನ ಏರ್ಪಟ್ಟಿದೆ. ಬಹುತೇಕ ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳು ಈ ಬಾರಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದು. ಆದರೆ ಬೆಟ್ಟಿಂಗ್ ಬಜಾರ್ ಮಾತ್ರ ಯಾವ ಮೈತ್ರಿ ಕೂಟಕ್ಕು ಬಹುಮತ ಬರದೆ ಅತಂತ್ರ ಫಲಿತಾಂಶ ಬರುತ್ತದೆ ಎಂದು ಭವಿಷ್ಯ ನುಡಿದಿದೆ. ಆದರೆ ಈ ಎಲ್ಲಾ ಕುತೂಹಲಕ್ಕು ನಾಳೆ ತೆರೆ ಬೀಳಲಿದೆ.
ಜಾರ್ಖಂಡನಲ್ಲಿ ಅರಳಲಿದೆಯ ಕಮಲ !
ಈ ಬಾರೀಯ ಚುನಾವಣೋತ್ತರ ಸಮೀಕ್ಷೆಯಲ್ಲಿ ಜಾರ್ಖಂಡ್ನಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವರದಿ ಬಂದಿದ್ದು. ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟಕ್ಕೆ ಸೋಲಾಗುತ್ತದೆ ಎಂದು ಬಹುತೇಕ ಸಮೀಕ್ಷೆಗಳು ವರದಿ ಮಾಡಿವೆ.
ಚನ್ನಪಟ್ಟಣದ ಮೇಲೆ ರಾಜ್ಯದ ಕಣ್ಣು: ಏನಾಗಲಿದೆ ಕರ್ನಾಟಕ ಉಪಚುನಾವಣೆ ಭವಿಷ್ಯ
ಚನ್ನಪಟ್ಟಣ ಸೇರಿದಂತೆ ರಾಜ್ಯದ ಮೂರು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿದ್ದು. ಇವುಗಳಲ್ಲಿ ಚನ್ನಪಟ್ಟಣದ ಮೇಲೆ ಇಡೀ ರಾಜ್ಯ ಗಮನ ಹರಿಸಿದೆ. ಒಂದು ಕಡೆ ಸೈನಿಕನಾಗಿ ಸಿ.ಪಿ.ಯೋಗೇಶ್ವರ್ ಇದ್ದರೆ ಮತ್ತೊಂದೆಡೆ ಅಭಿಮನ್ಯುವಾಗಿ ನಿಖಿಲ್ಕುಮಾರಸ್ವಾಮಿ ಕದನ ರಂಗದಲ್ಲಿ ಹೋರಾಡಿದ್ದಾರೆ. ಇಬ್ಬರಲ್ಲಿ ಯಾರು ಗೆಲ್ಲಲಿದ್ದಾರೆ ಎಂದು ಕುತೂಹಲ ಮೂಡಿಸಿದ್ದು. ಯಾರೇ ಗೆದ್ದರು ಅತ್ಯಲ್ಪ ಮತಗಳಿಂದ ಗೆಲ್ಲುತ್ತಾರೆ ಎಂದು ಹೇಳಲಾಗುತ್ತಿದೆ.
ಚನ್ನಪಟ್ಟಣದ ಜೊತೆಗೆ ಸಂಡೂರು ಮತ್ತು ಶಿಗ್ಗಾಂವಿಯಲ್ಲು ಉಪಚುನಾವಣೆ ನಡೆದಿದ್ದು. ಈ ಕ್ಷೇತ್ರಗಳು ಕೂಡ ಪ್ರತಿಷ್ಟೆಯ ಕಣವಾಗಿ ಬದಲಾಗಿದ್ದು. ಇಲ್ಲಿ ಯಾರು ಗೆಲ್ಲುತ್ತಾರೆ ಎಂಬುವ ಬಗ್ಗೆಯು ಬಾರೀ ಕುತೂಹಲ ಮೂಡಿಸಿದೆ.