Monday, January 27, 2025

5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

ದೆಹಲಿ : ನೈಜೀರಿಯಾ, ಬ್ರೆಜಿಲ್ ಮತ್ತು ಗಯಾನಾ ಮೂರೂ ರಾಷ್ಟ್ರಗಳ ಪ್ರವಾಸ ಮುಗಿಸಿ ಪ್ರಧಾನಿ ನರೇಂದ್ರ ಮೋದಿ ತವರಿಗೆ ಪ್ರಯಾಣ ಬೆಳೆಸಿದ್ದಾರೆ. ಐದು ದಿನಗಳಲ್ಲಿ ಮೂರೂ ರಾಷ್ಟ್ರಗಳ ಪ್ರವಾಸ ಕೈಗೊಂಡಿದ್ದ ಮೋದಿ ಈ ವೇಳೆ ಭಾರತ- ಕೆರಿಬಿಯನ್ ಸಮುದಾಯ ಶೃಂಗಸಭೆಯ ಸಹ- ಅಧ್ಯಕ್ಷರಾಗಿ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಿದರು ಜೊತೆಗೆ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಿದರು.

ಗುರುವಾರ ಗಯಾನಾದಿಂದ ಭಾರತಕ್ಕೆ ಪ್ರಯಾಣ ಬೆಳೆಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ.ಪ್ರಧಾನಿಯವರು ಭಾನುವಾರ ನೈಜೀರಿಯಾಕ್ಕೆ ಆಗಮಿಸಿದ್ದರು, ಪಶ್ಚಿಮ ಆಫ್ರಿಕಾ ದೇಶಕ್ಕೆ ಭಾರತೀಯ ಪ್ರಧಾನಿಯ ಮೊದಲ ಭೇಟಿಯಾಗಿದೆ. ಅಲ್ಲಿ ಅವರು ಅಧ್ಯಕ್ಷ ಬೋಲಾ ಅಹ್ಮದ್ ಟಿನುಬು ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು ಮತ್ತು ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಿದರು.

ಅವರ ಭೇಟಿಯ ಸಮಯದಲ್ಲಿ, ಅವರಿಗೆ ನೈಜೀರಿಯಾದ ರಾಷ್ಟ್ರೀಯ ಪ್ರಶಸ್ತಿ, ಗ್ರಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಜರ್ ಅನ್ನು ನೀಡಲಾಯಿತು. ನೈಜೀರಿಯಾದಿಂದ, ಜಿ 20 ಶೃಂಗಸಭೆಯಲ್ಲಿ ಭಾಗವಹಿಸಲು ಮೋದಿ ಬ್ರೆಜಿಲ್‌ಗೆ ತೆರಳಿದರು, ಅಲ್ಲಿ ಅವರು ಯುಎಸ್ ಅಧ್ಯಕ್ಷ ಜೋ ಬಿಡೆನ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಬ್ರಿಟಿಷ್ ಪ್ರಧಾನಿ ಕೀರ್ ಸ್ವಾರ್ಮರ್ ಸೇರಿದಂತೆ ಜಾಗತಿಕ ನಾಯಕರನ್ನು ಭೇಟಿಯಾದರು. ಅಲ್ಲದೆ ವಿಶ್ವದ ಇತರ ಹಲವು ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.

RELATED ARTICLES

Related Articles

TRENDING ARTICLES