ಬೆಂಗಳೂರು : ಸರ್ಕಾರಿ ಕಾರ್ಯಕ್ರಮದ ವಿಡೀಯೋ ಕಾನ್ಫ್ರೆನ್ಸ್ನಲ್ಲಿ ವಿದ್ಯಾರ್ಥಿಯೊಬ್ಬ ‘ವಿದ್ಯಾಮಂತ್ರಿಗೆ ಕನ್ನಡ ಬರಲ್ಲ’ ಎಂದ ಹೇಳಿದಕ್ಕೆ. ಮಧು ಬಂಗಾರಪ್ಪ ಆ ವಿದ್ಯಾರ್ಥಿ ಮೇಲೆ ಕ್ರಮ ಕೈಗೊಳ್ಳಲು ಸೂಚಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಸಚಿವ ಮಧು ಬಂಗಾರಪ್ಪ ಮಾಧ್ಯಮದವರೊಂದಿಗೆ ಮಾತನಾಡಿದ್ದು. ಸ್ಪಷ್ಟೀಕರಣ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಮಧು ಬಂಗಾರಪ್ಪ ‘ ನಾನು ವಿದ್ಯಾರ್ಥಿ ಮೇಲೆ ಕ್ರಮಕ್ಕೆ ಸೂಚನೆ ವಿಚಾರವಾಗಿ ಮಾತನಾಡಿಲ್ಲ. ಆದರೆ ಮಕ್ಕಳ ಮೇಲೆ ಪ್ರಾಂಶುಪಾಲರಿಗೆ ಹತೋಟಿ ಇರಬೇಕು. ಅದಕ್ಕೆ ಪ್ರಾಂಶುಪಾಲರಿಗೆ ನಾನು ಹೇಳಿದ್ದು. ಅಂದು ಸುಮಾರು 50 ಸಾವಿರ ಮಕ್ಕಳು ಲೈವ್ ನೋಡ್ತಿದ್ದಾರೆ ಅವರ ಭವಿಷ್ಯಕ್ಕಾಗಿ ಯೋಜನೆ ರೂಪಿಸ್ತಿದ್ದೇವೆ. ಅಂತಹ ಸಂದರ್ಭದಲ್ಲಿ ಈ ರೀತಿಯಾಗಿ ಮಾತನಾಡುವುದು ತಪ್ಪು’ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಸಚಿವ ಮಧು ಬಂಗಾರಪ್ಪ ‘ಕ್ಲಾಸ್ನಲ್ಲಿ ಡಿಸಿಪ್ಲೀನ್ ಇರಬೇಕಲ್ಲ.ನಾನು ಒಬ್ಬ ತಂದೆಯಾಗಿ ಅದನ್ನ ಹೇಳ್ತೇನೆ. ಯಾರೋ ಟ್ರೋಲ್ ಮಾಡ್ತಾರೆ ಎಂದು ನಾನು ತಲೆ ಕೆಡಿಸಿಕೊಳ್ಳಲ್ಲ. ಚುನಾವಣೆಯಲ್ಲಿ ನಾಗೇಶ್ ನನ್ನನ್ನ ದಡ್ಡ ಎಂದು ಕರೆದರು. ಆದರೆ ಜನ ನನ್ನನ್ನು ಗೆಲ್ಲಿಸಿ, ಬುದ್ದಿವಂತರನ್ನು ಸೋಲಿಸಿದರು. ನಾನು ಯಾವ ಮಕ್ಕಳನ್ನು ತಾರತಮ್ಯದಿಂದ ನೋಡುವುದಿಲ್ಲ. ನನ್ನ ಸ್ವಂತ ಮಕ್ಕಳಂಗೆ ಶಾಲಾ ಮಕ್ಕಳನ್ನು ನೋಡುತ್ತೇನೆ. ಅಂತದರಲ್ಲಿ ಟ್ರೋಲ್ ಮಾಡಿ ನನ್ನನ್ನು ಬಗ್ಗಿಸೋದಕ್ಕೆ ಸಾಧ್ಯವಿಲ್ಲ, ಅದಕೆಲ್ಲ ನಾನು ಬಗ್ಗುವವನಲ್ಲ’ ಎಂದು ಹೇಳಿದರು.
ಅನುದಾನ ಕೊರೆತೆ ಬಗ್ಗೆ ಮಧು ಬಂಗಾರಪ್ಪನ ಮಾತು
ಅನುದಾನ ಕೊರತೆ ಬಗ್ಗೆ ಶಾಸಕರ ಅಸಮಾಧಾನ ವಿಚಾರವಾಗಿ ಮಾತನಾಡಿದ ಶಿಕ್ಷಣ ಸಚಿವರು ‘ ಹಿಂದಿನ ಸರ್ಕಾರ 35-40 ಕೋಟಿ ಬಿಲ್ ಪಾವತಿ ಪೆಂಡಿಂಗ್ ಇಟ್ಟಿದೆ. ಹಿಂದಿನ ಸರ್ಕಾರದ ಹಳೆಯ ಬಾಕಿಯನ್ನು ನಮ್ಮದೇ ಸರ್ಕಾರ ಕೊಟ್ಟಿದೆ.ಹಿಂದಿನ ಸರ್ಕಾರ ಎಷ್ಟು ಬಸ್ ತೆಗೆದುಕೊಂಡಿದೆ? ಹಿಂದಿನ ಸರ್ಕಾರ ಮಾಡದೇ ಇರುವುದರಿಂದ ಬ್ಯಾಕ್ ಲಾಗ್ ಆಗಿದೆ. ಅವರು ಕೆಲಸ ಮಾಡದೆ ಇರುವುದರಿಂದ ನಮಗೆ ಕೆಲಸದ ಹೊರೆ ಹೆಚ್ಚಾಗಿದೆ ಅದನ್ನುನಾವು ನಿಬಾಯಿಸುತ್ತಿದ್ದೇವೆ. ಗೊಂದಲದ ಬಗ್ಗೆ ನಮ್ಮ ಶಾಸಕರಿಗೆ ಮನವರಿಕೆ ಮಾಡಿಕೊಡುತ್ತೇವೆ’ ಎಂದು ಹೇಳಿದರು.