Wednesday, January 22, 2025

ರಾಜ್ಯ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ ಈಶ್ವರಪ್ಪ

ಶಿವಮೊಗ್ಗ: ಬಿಪಿಎಲ್​​ ಕಾರ್ಡ್​ ವಿಚಾರವಾಗಿ ಮಾತನಾಡಿದ ಮಾಜಿ ಸಚಿವ ಕೆ.ಎಸ್​​ ಈಶ್ವರಪ್ಪ ರಾಜ್ಯ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದು. ಸರ್ಕಾರದ ವಿರುದ್ದ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.

ಮಾಧ್ಯಮದ ಜೊತೆಗೆ ಮಾತನಾಡಿದ ಈಶ್ವರಪ್ಪ ‘ರಾಜ್ಯದಲ್ಲಿ ರಾಜ್ಯ ಸರ್ಕಾರದ ಧೋರಣೆ ಸರಿಯಿಲ್ಲ
ಈಗ ರೇಷನ್ ಕಾರ್ಡ್ ಗೊಂದಲ ಉಂಟು ಮಾಡಿದ್ದಾರೆ ಇದರಿಂದಾಗಿ ಬಡವರು ತುಂಬ ಗೊಂದಲಕ್ಕೆ ‌ಒಳಗಾಗಿದ್ದಾರೆ. ನಮ್ಮ ಜಿಲ್ಲೆಯಲ್ಲಿ 3 ಲಕ್ಷದ 80 ಸಾವಿರ ಬಿಪಿಎಲ್ ಕಾರ್ಡ್ ಇವೆ 2 ಸಾವಿರಕ್ಕೂ ಅಧಿಕ ಬಿಪಿಎಲ್ ಕಾರ್ಡ್ ರದ್ದಾಗಿದೆ. ಕೇಂದ್ರ ಸರ್ಕಾರದ ನೀತಿಯಿಂದ ನಮಗೆ ಸಮಸ್ಯೆ ಆಗಿದೆ ಎಂದು ರಾಜ್ಯ ಸರ್ಕಾರದವರು ಹೇಳುತ್ತಾರೆ, ಆದರೆ ಅದಕ್ಕೆ ಪರಿಹಾರ ಕಂಡುಹಿಡಿಯುವ ಕೆಲಸ ಮಾಡುತ್ತಿಲ್ಲ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಈಶ್ವರಪ್ಪ,’ಜನರಿಗಾಗಿರುವ ಗೊಂದಲಕ್ಕೆ ‌ಪರಿಹಾರ ಕಂಡು ಹಿಡಿಯಲು ಸರ್ಕಾರ ವೇಗವಾಗಿ ಕೆಲಸ ಮಾಡಬೇಕು. ಮುನಿಯಪ್ಪ ಅವರು ಯಾವ ಕಾರ್ಡ್ ರದ್ದು ಮಾಡಲ್ಲ ಒಂದು ವಾರದಲ್ಲಿ ಸರಿ ಮಾಡ್ತೀವಿ ಅಂದಿದ್ದಾರೆ. ಒಂದು ವಾರದಲ್ಲಿ ಸರಿಯಾಗಲಿಲ್ಲ ಅಂದ್ರೆ ಜನರನ್ನು ಕರೆದುಕೊಂಡು ಹೋಗಿ ಹೋರಾಟ ಮಾಡ್ತೇನೆ.

ಐಟಿ ಕಟ್ಟುವರು, ಸರ್ಕಾರಿ ನೌಕರರ ಕಾರ್ಡ್ ರದ್ದು ಮಾಡ್ತೀವಿ ಅಂತಾರೆ, ಆದರೆ ಬಡವರ ಕಾರ್ಡ್​ಗಳನ್ನು ರದ್ದು ಮಾಡುತ್ತಿದ್ದಾರೆ. ಬಡವರ ಹಣವನ್ನು ಕಿತ್ತುಕೊಂಡು ಬಡವರಿಗೆ ಕೊಡುವ ಕೆಲಸ ಮಾಡುತ್ತಿದ್ದಾರೆ. ಆಸ್ಪತ್ರೆ ಚಿಕಿತ್ಸಾ ದರ ಜಾಸ್ತಿ ಮಾಡಲು ಹೊರಟ್ಟಿದ್ದಾರೆ . ಈ ರೀತಿಯಾಗಿ ಕೇವಲ ಬಡವರ ಹೊಟ್ಟೆ ಮೇಲೆ ಹೊಡೆಯುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.

ವಕ್ಫ್​ ಬಗ್ಗೆ ಈಶ್ವರಪ್ಪ ಮಾತು !

ವಕ್ಫ್​ ಆಸ್ತಿ ವಶಪಡಿಸಿಕೊಳ್ಳುತ್ತಿರುವ ವಿಷಯವಾಗಿ ಮಾತನಾಡಿದ ಈಶ್ವರಪ್ಪ ‘ವಕ್ಪ್ ಆಸ್ತಿ ಬಗ್ಗೆ ಬಿಲ್ ತಯಾರಿಕೆಗೆ ಕಾಂಗ್ರೆಸ್ ‌ನವರು ಸಹಕಾರ ಕೊಟ್ಟಿಲ್ಲ. ಮಠ ಮಂದಿರ, ದೇವಸ್ಥಾನ ವಕ್ಪ್ ಆಸ್ತಿ ಅಂತಿದ್ದಾರೆ ಪರವಾಗಿಲ್ವಾ
ಮುಸ್ಲಿಂರಿಗೆ ಅನುಕೂಲ ಆದರೆ ಕಾಂಗ್ರೆಸ್​ನವರಿಗೆ ಹಾಲು ಕುಡಿದಷ್ಟು ಸಂತೋಷ ಆಗ್ತದೆ. ಈ ದೇಶದಲ್ಲಿ ವಕ್ಫ್ ಎನ್ನುವ ಪದವೇ ಇರಬಾರದು ಅದನ್ನು ‌ಕಿತ್ತು ಬಿಸಾಕಿ ಎಂಬ ಕೂಗು ಕೇಳಿಬರುತ್ತಿದೆ. ರೈತರು, ದೇವಸ್ಥಾನ, ಮಠ ಮಂದಿರದ ಆಸ್ತಿ ಹಾಗೆಯೇ ಉಳಿಯಬೇಕು’ ಎಂದು ಹೇಳಿದರು.

RELATED ARTICLES

Related Articles

TRENDING ARTICLES