Monday, December 23, 2024

ಅನುದಾನ ಕೊರೆತೆ ಹಿನ್ನಲೆ : ಅಸಮಧಾನಗೊಂಡ ಕಾಂಗ್ರೆಸ್​​ ಶಾಸಕರು

ಬೆಂಗಳೂರು : ರಾಜ್ಯ ಕಾಂಗ್ರೆಸ್​​ ಸರ್ಕಾರದ ಗ್ಯಾರಂಟಿ ಫಲದಿಂದಾಗಿ ಅಭಿವೃದ್ದಿ ಕಾರ್ಯಗಳಿಗೆ ನೀಡುವ ಅನುಧಾನದಲ್ಲಿ ಕೊರೆತೆಯಾಗುತ್ತಿದ್ದು. ಇದರಿಂದಾಗಿ ಕಾಂಗ್ರೆಸ್​ ಸರ್ಕಾರದ ಮೇಲೆ ಸ್ವಪಕ್ಷ ನಾಯಕರು ಕೋಪಗೊಂಡಿದ್ದು. ಅನುದಾನದ ವಿಚಾರವಾಗಿ ಸರ್ಕಾರದ ಬಳಿ ಆಗ್ರಹ ಮಾಡಲು ತೀರ್ಮಾನಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.

ಕೆಲ ಸಚಿವರ ನಡೆ ಹಾಗೂ ಆಡಳಿತದಿಂದ ಕೈ ಶಾಸಕರು ಅಸಮಧಾನಗೊಂಡಿದ್ದು. ಅನುದಾನ ನೀಡದೆ ಇರುವ ವಿಚಾರದಲ್ಲಿಯು ಸಹ ಸರ್ಕಾರದ ಮೇಲೆ ಅಸಮದಾನಗೊಂಡಿದ್ದಾರೆ. ಇವೆಲ್ಲದರ ಜೊತೆ ವಕ್ಫ್​​ನಿಂದ ಸರ್ಕಾರಕ್ಕೆ ಸಾಕಷ್ಟು ಹಿನ್ನಡೆಯಾಗಿದೆ ಎಂದು ಸಹ ಶಾಸಕರು ಅಸಮಾಧಾನಗೊಂಡಿದ್ದಾರೆ.

ಇತ್ತೀಚೆಗೆ ರಾಜ್ಯದಲ್ಲಿ ನಡೆದ ಬಿಪಿಎಲ್ ಕಾರ್ಡ್ ಪರಿಷ್ಕರಣೆಯಿಂದ ಸರ್ಕಾರ ಜನರ ಕೆಂಗೆಣ್ಣಿಗೆ ಗುರಿಯಾಗಿದ್ದು.
ಅನುದಾನ ಕಡಿತದಿಂದ ಕ್ಷೇತ್ರದಲ್ಲಿ ಯಾವುದೇ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಅದರ ಜೊತೆಗೆ ಜಿಲ್ಲೆಯಲ್ಲಿನ ಸಮಸ್ಯೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಗಳು ಸ್ಪಂದಿಸುತ್ತಿಲ್ಲ ಎಂಬ ಆರೋಪವಿದ್ದು ಇವೆಲ್ಲ ಸಮಸ್ಯೆಯಿಂದ ಬೇಸತ್ತಿರುವ ಕಾಂಗ್ರೆಸ್​ ಶಾಸಕರು ಸರ್ಕಾರದ ಮೇಲೆ ಕೋಪಗೊಂಡಿದ್ಧಾರೆ ಎಂದು ಮಾಹಿತಿ ದೊರೆತಿದೆ.

ಈ ಎಲ್ಲಾ ಸಮಸ್ಯೆಗಳಿಂದ ಕಾಂಗ್ರೆಸ್​​ ಶಾಸಕರು ಅಸಮಾಧಾನಗೊಂಡಿದ್ದು. ಇವೆಲ್ಲದರ ಕುರಿತು ಬೆಳಗಾವಿಯಲ್ಲಿ ನಡೆಯುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಲು ಯೋಜನೆ ರೂಪಸಿಕೊಂಡಿದೆ ಎಂದು ಮಾಹಿತಿ ದೊರೆತಿದೆ.

 

RELATED ARTICLES

Related Articles

TRENDING ARTICLES