Sunday, December 22, 2024

‘ಹಿಂದೂಗಳಲ್ಲಿ ಒಗ್ಗಟ್ಟು ಮೂಡಿಸಿದ ಜಮೀರ ಅಹ್ಮದ್‌‌ಗೆ ಧನ್ಯವಾದ’: ಛಲವಾದಿ ನಾರಯಣ ಸ್ವಾಮಿ

ಕಲಬುರಗಿ: ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ‘ವಕ್ಫ್​​ ವಿಚಾರದಲ್ಲಿ ಹಿಂದುಗಳನ್ನು ಒಗ್ಗೂಡಿಸಿದ ಜಮೀರ್​ಗೆ ಧನ್ಯವಾದ ಎಂದು ಹೇಳಿದರು’.

ಮಾದ್ಯಮದವರೊಂದಿಗೆ ಮಾತನಾಡಿದ ನಾರಯಣಸ್ವಾಮಿ ‘ವಕ್ಫ್ ಬೋರ್ಡ್ ಹೆಸರಿನಲ್ಲಿ ರಾಜ್ಯದಲ್ಲಿ ಲ್ಯಾಂಡ್ ಜಿಹಾದ್ ನಡೆಯುತ್ತಿದೆ. ಇದರ ವಿರುದ್ಧ ಇದೀಗ ನಾವೆಲ್ಲಾ ಒಗ್ಗಟ್ಟಾಗಿ ಹೋರಾಟ ಮಾಡುತ್ತಿದ್ದೇವೆ. ಹಿಂದೂಗಳಲ್ಲಿ ಒಗ್ಗಟ್ಟು ಮೂಡಿಸಲು ಕಾರಣವಾದ ಜಮೀರ ಅಹ್ಮದ್‌‌ಗೆ ಧನ್ಯವಾದ. ಮಲಗಿದ್ದ ಹಿಂದೂಗಳನ್ನು ಎಬ್ಬಿಸುವ ಕೆಲಸ ಜಮೀರ್ ಅಹಮದ್ ಮಾಡಿದ್ದಾರೆ. ಈ ಕೆಲಸಕ್ಕೆ ಜಮೀರ್ ಅಹ್ಮದರನ್ನ ಭಗವಂತ ಕಳುಹಿಸಿದ್ದಾನೆ’ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಛಲವಾದಿ ನಾರಯಣಸ್ವಾಮಿ ಅನ್ಯ ಧರ್ಮಿಯರಿಂದ ಏನೇ ಕೊಡುಗೆ, ಭೀಕ್ಷೆ ಪಡೆಯಬಾರದು ಎಂದು ಇಸ್ಲಾಂ ಹೇಳುತ್ತದೆ.  ಕಾಫಿರರಿಂದ ಏನನ್ನು ತಗೊಳ್ಳಬಾರದು ಎಂದು ಅವರೇ ಹೇಳ್ತಾರೆ
ಹಾಗಾದ್ರೆ ವಕ್ಫ್ ಬೋರ್ಡ್‌‌‌ಗೆ ಜಮೀನು ಕೊಟ್ಟವರಾರು. ? ಮಠ ಮಾನ್ಯಗಳ ಆಸ್ತಿ ವಕ್ಫ್ ಬೋರ್ಡ್‌‌ಗೆ ಬರಲು ಕಾರಣ ಏನು ? ಆಸ್ತಿಗೆ ಸಂಬಂಧಿಸಿದ ಖರೀದಿ ಪತ್ರ ಇಲ್ಲದಿದ್ರೆ ಯಾರದೇ ಆಸ್ತಿ ಓನರ್ ಶಿಪ್ ಪ್ರೂ ಮಾಡಲು ಸಾಧ್ಯವೇ ಇಲ್ಲ ಸರಕಾರ ಕೂಡಲೇ ಕ್ಯಾಬಿನೆಟ್​ನಲ್ಲಿ ನಿರ್ಣಯ ಕೈಗೊಂಡು ವಕ್ಫ್ ಬೋರ್ಡ್ ಅಧಿಕಾರ ವಾಪಾಸ್ ಪಡೆಯಬೇಕು. ಸಿಎಂ ಸಿದ್ದರಾಮಯ್ಯ ರೈತರ ಜಮೀನಿನಲ್ಲಿ ವಕ್ಫ್ ಹೆಸರು ಬಂದಿದ್ದು ತಡೆ ಹಿಡಿಯಲು ಆದೇಶಿಸಿದ್ದಾರೆ. ಆದರೆ ಶಾಶ್ವತವಾಗಿ ರೈತರಿಗೆ ಗಂಡಾಂತರ ತಪ್ಪಿದ್ದಲ್ಲ’ ಎಂದು ಹೇಳಿದರು.

RELATED ARTICLES

Related Articles

TRENDING ARTICLES