Sunday, December 22, 2024

ಸುನೀತಾ ವಿಲಿಯಮ್ಸ್ ದೇಹದ ತೂಕದಲ್ಲಿ ಇಳಿಕೆ : ತಾಜಾ ಆಹಾರಗಳ ಕೊರತೆ ಎಂದ ತಜ್ಞರು

ನ್ಯೂಯಾರ್ಕ್: ಸುನಿತಾ ವಿಲಿಯಮ್ಸ್ ಹೆಸರು ಯಾರಿಗೆ ತಾನೇ ಗೊತ್ತಿಲ್ಲಾ ಹೇಳಿ. ಅಂತಾರಾಷ್ಟ್ರೀಯ ಬಾಹ್ಯಾಕಾಶದಲ್ಲಿ ಐದು ತಿಂಗಳಿನಿಂದ ಸುನಿತಾ ವಿಲಿಯಮ್ಸ್ ಸಿಲುಕಿಕೊಂಡಿದ್ದಾರೆ. ಇದೀಗ ಅವರ ದೇಹದ ತೂಕ ಇಳಿಕೆಯಾಗಿದ್ದು, ಬಾಹ್ಯಾಕಾಶದಲ್ಲಿ ಆಹಾರದ ಕೊರತೆ ಇದ್ಯಾ ಎಂಬ ಶಂಕೆ ಮೂಡಿದೆ.

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಐದು ತಿಂಗಳಿನಿಂದ ಸಿಲುಕಿ ಹಾಕಿಕೊಂಡಿರುವ ನಾಸಾ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರಿಗೆ ಸೇವಿಸಲು ಸಾಕಷ್ಟು ಆಹಾರವಿದೆ ಎಂದು ನಾಸಾ, ಅಂತಾರಾಷ್ಟ್ರೀಯ ಸಮುದಾಯಕ್ಕೆ ಭರವಸೆ ನೀಡಿದ್ದರೂ ಅವರ ಬಳಿ ಇರುವ ತಾಜಾ ಆಹಾರದ ಸಂಗ್ರಹವು ಕಡಿಮೆಯಾಗುತ್ತಿದೆ ಎಂದು ತಜ್ಞರು ಶಂಕಿಸಿದ್ದಾರೆ.

ಇಬ್ಬರೂ ಗಗನಯಾತ್ರಿಗಳು ಪಿಜ್ಜಾ, ರೋಸ್ಟ್ ಚಿಕನ್ ಮತ್ತು ಸೀಗಡಿ ಕಾಕ್‌ಟೇಲ್‌ಗಳನ್ನು ಸೇವಿಸುತ್ತಿದ್ದಾರೆ, ಆದರೆ ಅವರು ಕಡಿಮೆ ತಾಜಾ ಆಹಾರದ ಸ್ಟಾಕ್ ಹೊಂದಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಇತ್ತೀಚಿನ ಫೋಟೋ ಒಂದರಲ್ಲಿ ವಿಲಿಯಮ್ಸ್ ಅವರು ತುಂಬಾ ದುರ್ಬಲರಾಗಿ ಕಂಡು ಬಂದಿದ್ದು ಅವರ ಕೆನ್ನೆಗಳಲ್ಲಿ ಗುಳಿ ಬಿದ್ದಿರುವುದು ಗೋಚರಿಸಿದೆ. ಹೀಗಾಗಿ ಬಾಹ್ಯಾಕಾಶ ಸಂಸ್ಥೆ ಇಬ್ಬರು ಗಗನಯಾತ್ರಿಗಳ ಆರೋಗ್ಯವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದು ಈ ನಡುವೆ ಅವರ ಬಳಿ ಇರುವ ತಾಜಾ ಆಹಾರಗಳ ಸಂಗ್ರಹದ ಬಗ್ಗೆ ಊಹಾಪೋಹ ಆರಂಭವಾಗಿದೆ.

RELATED ARTICLES

Related Articles

TRENDING ARTICLES