Tuesday, January 14, 2025

ರಸ್ತೆ​ ಅಪಘಾತ; ಮೂವರು ಬೈಕ್​ ಸವಾರರಿಗೆ ಗಂಭೀರ ಗಾಯ

ಬೆಂಗಳೂರು : ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಬಳಿ ರ್‍ಯಾಪಿಡೋ ಬೈಕ್ ಅಪಘಾತವಾಗಿದ್ದು. ಬೈಕ್​​ನಲ್ಲಿದ್ದ ಪ್ರಯಾಣಿಸುತ್ತಿದ್ದ ಮೂವರಿಗೆ ಗಂಭೀರ ಗಾಯವಾಗಿದೆ ಎಂದು ಮಾಹಿತಿ ದೊರೆತಿದೆ.

ಮೆಜಸ್ಟಿಕ್​​ ರೈಲ್ವೇ ನಿಲ್ದಾಣದಲ್ಲಿ ಇಬ್ಬರು ಯುವಕರು ರ್‍ಯಾಪಿಡೋ ಬೈಕ್​​ ಟ್ಯಾಕ್ಸಿಯನ್ನು ಬುಕ್​​ ಮಾಡಿದ್ದರು. ಇವರನ್ನು ರ್‍ಯಾಪಿಡೋ  ಬೈಕ್​​ ಸವಾರ ಪಿಕ್​ ಮಾಡಿಕೊಂಡಿದ್ದು. ರೈಲ್ವೇ ನಿಲ್ದಾಣದಿಂದ ಸ್ವಲ್ಪ ಮುಂದೆ ಬರುತ್ತಿದ್ದಂತೆ ಬೈಕ್​ ಟ್ಯಾಂಕರ್​​ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಮಾಹಿತಿ ದೊರೆತಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಮೂವರು ಸವಾರರು ಕೆಳಗಿ ಬಿದ್ದಿದ್ದ. ಹೆಲ್ಮೆಟ್​  ಧರಿಸದೆ ಪ್ರಯಾಣಿಸುತ್ತಿದ್ದ ಕಾರಣಕ್ಕೆ ಮೂವರ ತಲೆಗೂ ಗಂಭೀರ ಗಾಯವಾಗಿದೆ ಎಂದು ಮಾಹಿತಿ ದೊರೆತಿದೆ. ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದು. ಮೂವರು ಪ್ರಾಣಾಪಾಯದಿಂದ ಪಾರಗಿದ್ದಾರೆ ಎಂದು ಮಾಹಿತಿ ದೊರೆತಿದೆ.  ಅಪಘಾತ ಸಂಬಂಧ  ಚಾಮರಾಜಪೇಟೆ ಸಂಚಾರಿ ಪೋಲಿಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

RELATED ARTICLES

Related Articles

TRENDING ARTICLES