Sunday, February 23, 2025

ಕೋತಿಗೆ ಹೃದಯಾಘಾತ: ಸಿಪಿಆರ್ ಮಾಡಿ ಜೀವ ಉಳಿಸಿದ ಯುವಕ

ಆಂದ್ರಪ್ರದೇಶ : ಹೃದಯಾಘಾತಕ್ಕೆ ಒಳಗಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಕೋತಿಯೊಂದಕ್ಕೆ ಯುವಕನೊಬ್ಬ ಸಕಾಲದಲ್ಲಿ ಸಿಪಿಆರ್ ಮಾಡಿ ಜೀವ ಉಳಿಸಿದ ಘಟನೆ ಆಂಧ್ರ ಪ್ರದೇಶದ ಮೆಹಬೂಬಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಸಿರೋಲು ಮಂಡಲ ಕೇಂದ್ರದಲ್ಲಿ ಕೋತಿಯೊಂದಕ್ಕೆ ವಿದ್ಯುತ್ ಸ್ಪರ್ಶವಾಗಿ ಕೆಳಗೆ ಬಿದ್ದಿದೆ. ನಿತ್ರಾಣಗೊಂಡು ಬಿದ್ದಿದ್ದ ಕೋತಿಗೆ ನಾಗರಾಜು ಎಂಬ ಯುವಕ ಕೂಡಲೇ ಸಿಪಿಆರ್ ಚಿಕಿತ್ಸೆ ನೀಡಿದ್ದಾರೆ. ಇದರಿಂದ ಪ್ರಜ್ಞೆ ಕಳೆದುಕೊಂಡಿದ್ದ ಕೋತಿ ಸ್ವಲ್ಪ ಹೊತ್ತಿನಲ್ಲೇ ಎಚ್ಚರಗೊಂಡು ಅಲ್ಲಿಂದ ಓಡಿ ಹೋಗಿದೆ. ಸಕಾಲದಲ್ಲಿ ಕೋತಿಯ ಜೀವ ಉಳಿಸಿದ ನಾಗರಾಜುಗೆ ಅಭಿನಂದನೆಯ ಮಹಾಪೂರವೇ ಹರಿದುಬಂದಿದೆ.

RELATED ARTICLES

Related Articles

TRENDING ARTICLES