Saturday, December 21, 2024

ಬದುಕಿದ ವ್ಯಕ್ತಿಯ ನಕಲಿ ಡೆತ್ ಸರ್ಟಿಫಿಕೇಟ್ ಮಾಡಿ ಆಸ್ತಿ ಕಬಳಿಸಿದ ದಾಯಾದಿಗಳು

ರಾಯಚೂರು : ಬದುಕಿದ ವ್ಯಕ್ತಿಯ ಡೆತ್​​ ಸರ್ಟೀಫಿಕೇಟ್ ಸೃಷ್ಟಿ​​ ಮಾಡಿ ಆಸ್ತಿ ಕಬಳಿಕೆ ಮಾಡಿದ ಘಟನೆ ರಾಯಚೂರಿನಲ್ಲಿ ನಡೆದಿದ್ದು. ಸ್ವಂತ ದಾಯಾದಿಗಳೆ ಇಂತಹ ಕೆಲಸಕ್ಕೆ ಕೈಹಾಕಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕಲಂಗೇರ ಗ್ರಾಮದಲ್ಲಿ ಘಟನೆ ನಡೆದಿದ್ದು. ಆಂಜನೇಯ ಮತ್ತು  ಮಾನಪ್ಪ ಎಂಬುವವರು ತಮ್ಮ ಸ್ವಂತ ಸಹೋದರನಾದ ಬಸಪ್ಪನಿಗೆ ವಂಚನೆ ಮಾಡಿದ್ದಾರೆ. ಬದುಕಿರುವ ಬಸಪ್ಪನ ನಕಲಿ ಡೆತ್​ ಸರ್ಟಿಫಿಕೇಟ್​ ಸೃಷ್ಟಿ ಮಾಡಿದ್ದು. ಅಧಿಕಾರಿಗಳ ಕುಮ್ಮಕ್ಕಿನಿಂದ 27 ಎಕರೆ ಜಮೀನನ್ನು  ಕಬಳಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.

ಮೋಸ ಮಾಡಿದ ಕುರಿತು ಬಸಪ್ಪ ತನ್ನ ಸಹೋದರರ ಬಳಿ ಕೇಳಿದ್ದಕ್ಕೆ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ತಿಳಿದು ಬಂದಿದ್ದು. ಇವೆಲ್ಲದರಿಂದ ಬೇಸತ್ತ ಬಸಪ್ಪ ಸಿರವಾರದ ತಹಸಿಲ್ದಾರ್​ಗೆ  ದೂರು ಕೊಟ್ಟಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗದೆ ಇದ್ದಿದ್ದರಿಂದ, ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಜಿಲ್ಲಾಧಿಕಾರಿಗಳು ಕಲಂಗೇರಿ ಗ್ರಾಮದ ಗ್ರಾಮ ಲೆಕ್ಕಾಧಿಕಾರಿಯಾದ ಕುಲಕರ್ಣಿಯನ್ನು ಕೆಲಸದಿಂದ ವಜಾಗೊಳಿಸಿದ್ದಾರೆ ಎಂದು ಮಾಹಿತಿ ಬಂದಿದೆ.

 

RELATED ARTICLES

Related Articles

TRENDING ARTICLES