Sunday, December 22, 2024

ಮುಗ್ಧ ಯುವಕ ಡೆಡ್ಲಿ ನಕ್ಸಲ್ ಆಗಿದ್ದು ಹೇಗೆ? ವಿಕ್ರಮ್​​ ಗೌಡನ ರೋಚಕ ಜೀವನ ಚರಿತ್ರೆ

ಉಡುಪಿ : ಇತ್ತೀಚೆಗೆ ಪ್ರೀತಂ ಬೈಲ್​​ನಲ್ಲಿ ಮೋಸ್ಟ್​​ ವಾಂಟೆಡ್​​ ನಕ್ಸಲ್​​ ವಿಕ್ರಮ್​​ ಗೌಡನನ್ನು ANF ಹೊಡೆದುರುಳಿಸಿದ್ದು. ಮೂರು ರಾಜ್ಯಕ್ಕೆ ಬೇಕಿದ್ದ ಕುಖ್ಯಾತ ನಕ್ಸಲ್​​ನನ್ನು ಎನ್​ಕೌಂಟರ್​​ ಮಾಡುವ ಮೂಲಕ ನಕ್ಸಲ್​​ ಕಾರ್ಯಚರಣೆಯಲ್ಲಿ ಅತಿದೊಡ್ಡ ಗೆಲುವನ್ನು ಸಾಧಿಸಲಾಗಿತ್ತು. ಆದರೆ ಮುಗ್ದ ಹುಡುಗನೊಬ್ಬ ನಕ್ಸಲ್​​ ಆಗಿದ್ದೇ ರೋಚಕ ಕತೆಯಾಗಿದ್ದು. ಆತನ ಜೀವನದ ಕುರಿತು ಸಮಗ್ರ ವರದಿಯನ್ನು ಈ ಕೆಳಗೆ ನೀಡಲಾಗಿದೆ.

ಉಡುಪಿಯ ಹೆಬ್ರಿಯಲ್ಲಿ ಜನಿಸಿದ ವಿಕ್ರಮ್​​. ಅತ್ಯಂತ ಬಡತನ ಜೀವನದಲ್ಲಿ ತನ್ನ ಬಾಲ್ಯವನ್ನು ಕಳೆದನು. 5 ನೇ ತರಗತಿಯವರೆಗೆ ಓದಿದ ವಿಕ್ರಮ್​​ ಮನೆಗೆ ಸಹಾಯವಾಗಲಿ ಎಂದು ಹೋಟೆಲ್​ವೊಂದರಲ್ಲಿ ಕ್ಲಿನರ್ ಆಗಿ ಕೆಲಸಕ್ಕೆ ಸೇರಿಕೊಂಡನು. ಆದರೆ ಹೆಚ್ಚು ಆದಾಯವಿಲ್ಲದ ಕಾರಣ ತನ್ನ 16 ನೇ ವಯಸ್ಸಿನಲ್ಲಿ ಮುಂಬೈಗೆ ಹೋದ ವಿಕ್ರಂ ಅಲ್ಲಿನ ಹೋಟೆಲ್​ವೊಂದರಲ್ಲಿ ಎಂಜಲು ತಟ್ಟೆ-ಲೋಟ ತೊಳೆಯುವ ಕೆಲಸಕ್ಕೆ ಸೇರಿಕೊಂಡನು. ಆದರೆ ತನ್ನ 21ನೇ ವಯಸ್ಸಿನಲ್ಲಿ ಆ ಕೆಲಸದಿಂದ ಬೇಸತ್ತ ವಿಕ್ರಂ ಮತ್ತೆ ತನ್ನ ಗ್ರಾಮಕ್ಕೆ ಮರಳಿದನು.

ಗ್ರಾಮಕ್ಕೆ ಮರಳುವ ವೇಳೆಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಯೋಜನೆಯಬ ಬಗ್ಗೆ ಉಡುಪಿ ಭಾಗದಲ್ಲಿ ನಕ್ಸಲ್​ ಚಟುವಟಿಕೆಗಳು ಆರಂಭವಾಗಿದ್ದವು. ನಕ್ಸಲ್​​ ಸಿದ್ದಂತಕ್ಕೆ ಆಕರ್ಷಿತನಾದ ವಿಕ್ರಂ ಜನರಲ್ಲಿ ಅರಿವು ಮೂಡಿಸಲು ಪ್ರತಿಗ್ರಾಮಕ್ಕೆ ತೆರಳಿ ಲಾವಣಿ ಪದಗಳು ಮತ್ತು ಕ್ರಾಂತಿ ಗೀತೆಗಳನ್ನು ಹಾಡುತ್ತಿದ್ದನು. ಇದರಿಂದ ಇವನ ಮೇಲೆ ಕುಪಿತಗೊಂಡ ಸ್ಥಳೀಯ ಅರಣ್ಯ ಅಧಿಕಾರಿ ಜಯರಾಮ ಗೌಡ ಈತನ ಮೇಲೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದನು. ಅರಣ್ಯದಲ್ಲಿ ಯಾರೇ ಮರ ಕಡಿದರು ವಿಕ್ರಂ ಮೇಲೆ ತನ್ನ ಪ್ರತಾಪ ತೋರಿಸುತ್ತಿದ್ದನು. ಒಂದು ಬಾರಿಯಂತೂ ವಿಕ್ರಂ ತಾಯಿಯ ಮುಂದೆಯೆ ಹಲ್ಲೆ ಮಾಡಿದ್ದನು. ಇದರಿಂದ ಬೇಸತ್ತಿದ್ದ ವಿಕ್ರಮ್​ ಅರಣ್ಯ ಅಧಿಕಾರಿಯ ಮೇಲೆ ತಿರುಗಿಬಿದ್ದನು.

ಮೊದಲೆ ನಕ್ಸಲ್​​ ಮತ್ತು ಕಮ್ಯುನಿಸಂ ಸಿದ್ದಾಂತದಿಂದ ಪ್ರೇರಣೆಯಾಗಿದ್ದ ವಿಕ್ರಂಗೆ. ಅರಣ್ಯಾಧಿಕಾರಿ ನೀಡಿದ ಕಿರುಕುಳ ಒಬ್ಬ ಪರಿಪೂರ್ಣ ನಕ್ಸಲ್​ ಆಗಲು ದಾರಿ ಮಾಡಿಕೊಟ್ಟಿತ್ತು. ಕರ್ನಾಟಕ ವಿಮೋಚನ ಸಂಘಕ್ಕೆ ಸೇರಿದನು. ಕಾಡು ಜನರಿಗೆ ಅನ್ಯಾಯವಾಗುತ್ತಿದೆ ಎಂದು ಚಳುವಳಿ ಆರಂಭಿಸಿದ ವಿಕ್ರಂ ಜನರನ್ನು ಸರ್ಕಾರದ ವಿರುದ್ದ ಎತ್ತಿಕಟ್ಟುವ ಕೆಲಸಕ್ಕೆ ಮುಂದಾದನು.

ಸಾಕೇತ್​ರಾಜನ್​​ನಿಂದ ಪ್ರೇರಣೆ ಪಡೆದಿದ್ದ ವಿಕ್ರಮ್​ ಗೌಡ. ಸಾಕೇತ್​ರಾಜನ್​​​ ಮರಣದ ನಂತರ ನಕ್ಸಲ್​ ಚಟುವಟಿಕೆಯನ್ನು ಕೃಷ್ಣಮೂರ್ತಿ ವಹಿಸಿಕೊಂಡನು. ಆದರೆ ಕೃಷ್ಣಮೂರ್ತಿಯನ್ನು ಹೊಡೆದುರುಳಿಸಿದ ನಂತರ ದಕ್ಷಿಣ ಭಾರತದ ನಕ್ಸಲ್​​ ಚಟುವಟಿಕೆಯನ್ನು ಸಂಪೂರ್ಣವಾಗಿ ವಿಕ್ರಂ ಕೈಗೆತ್ತಿಕೊಂಡನು. ಸುಮಾರು ಎರಡು ದಶಕಗಳ ಕಾಲ ನಕ್ಸಲ್​​ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದ ವಿಕ್ರಂ ಕೇರಳ ಮತ್ತು ಕರ್ನಾಟಕ ಭಾಗದಲ್ಲಿ ನಕ್ಸಲ್​ ಚಟುವಟಿಕೆಯಲ್ಲಿ ಭಾಗವಹಿಸಿ ತಂಡ ಕಟ್ಟುವ ಕೆಲಸಕ್ಕೆ ಮುಂದಾಗಿದ್ದನು.

ಆದರೆ ನವೆಂಬರ್​​ 19ರಂದು ANF ನಡೆಸಿದ ಕಾರ್ಯಚರಣೆಯಲ್ಲಿ ವಿಕ್ರಂ ಗೌಡ ಹತನಾಗಿದ್ದು. ಭವ್ಯ ಭವಿಷ್ಯನ್ನು ಕಾಣಬೇಕಿದ್ದ ಯುವಕನೊಬ್ಬ ಬೀದಿ ಹೆಣದ ರೀತಿಯಲ್ಲಿ ಸಾವನ್ನಪ್ಪಿದ್ದಾನೆ. ನನ್ನೆ ಮಧ್ಯಾಹ್ನದ ಹೊತ್ತಿಗೆ ವಿಕ್ರಂ ಅಂತ್ಯಸಂಸ್ಕಾರ ನಡೆದಿದ್ದು. ವಿಕ್ರಂ ಸಹೋದರ ಅಂತಿಮ ಕ್ರಿಯೆ ನಡೆಸಿದ್ದಾರೆ.

 

 

RELATED ARTICLES

Related Articles

TRENDING ARTICLES