ಬೆಂಗಳೂರು: ಇತಿಹಾಸದಲ್ಲೆ ಮೊದಲ ಬಾರಿಗೆ ತೆಂಗಿನ ಕಾಯಿ ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದಿದ್ದು. ದೊಡ್ಡ ಗಾತ್ರದ ಒಂದು ತೆಂಗಿನಕಾಯಿಗೆ 60 ರೂಪಾಯಿವರೆಗೆ ಮಾರಾಟವಾಗುತ್ತಿದೆ ಎಂದು ಮಾಹಿತಿ ದೊರೆತಿದೆ.
ದಿನದಿಂದ ದಿನಕ್ಕೆ ತೆಂಗಿನ ಕಾಯಿ ಬೆಲೆ ಗಗನಕ್ಕೆ ಏರುತ್ತಿದೆ. ಮೊದಲೆ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಗ್ರಾಹಕರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂಬುದಂತು ನಿಜ.
ಈ ಬಾರಿ ಬೇಸಿಗೆಯಲ್ಲಿ ಎಳನೀರಿಗೆ ಬಾರಿ ಬೇಡಿಕೆ ಇದ್ದ ಕಾರಣ. ಕರ್ನಾಟಕ ಸೇರಿದಂತೆ ಬೇರೆ ರಾಜ್ಯಗಳಿಂದ ಬಾರಿ ಪ್ರಮಾಣದ ಎಳನೀರನ್ನು ರಫ್ತು ಮಾಡಲಾಗಿದೆ. ಇದರ ಪರಿಣಾಮವಾಗಿ ತೆಂಗಿನ ಕಾಯಿ ಇಳುವರಿಯಲ್ಲಿ ಕುಸಿತವಾಗಿದ್ದು. ತೆಂಗಿನ ಕಾಯಿ ಬೆಲೆಯಲ್ಲಿ ಭಾರೀ ಪ್ರಮಾಣದ ಏರಿಕೆಯಾಗಿದೆ ಎಂದು ಮಾಹಿತಿ ದೊರೆತಿದೆ.
ಕಾರ್ತಿಕ ಮಾಸದ ಹಿನ್ನಲೆ ಮದುವೆ ಸೇರಿದಂತೆ ಗೃಹ ಪ್ರವೇಶದಂತಹ ಕಾರ್ಯಕ್ರಮಗಳ ಸಂಖ್ಯೆ ಹೆಚ್ಚಾಗಿದ್ದು. ಇದರ ಜೊತೆಗೆ ತೆಂಗಿನಕಾಯಿಯ ಬೇಡಿಕೆಯು ಹೆಚ್ಚಾಗಿದೆ. ಕಳೆದ 15 ದಿನದ ಹಿಂದೆ 50ರೂಪಾಯಿ ಕೆಜಿಗೆ ಇದ್ದ ತೆಂಗಿನ ಕಾಯಿ ಬೆಲೆ. ಇದೀಗ 56 ರಿಂದ 57 ರೂಪಾಯಿಗೆ ಮಾರಾಟವಾಗುತ್ತಿದೆ. ಈ ವಾರ ಕಳೆಯುವುದರೊಳಗೆ 60 ರೂಪಾಯಿಗೆ ಏರಿಕೆ ಆಗುವ ಸಾಧ್ಯತೆ ಇದೆ ಎಂದು ಮಾಹಿತಿ ದೊರೆತಿದೆ.