Sunday, December 22, 2024

ವರದಕ್ಷಿಣೆ ಕಿರುಕುಳ : 6 ತಿಂಗಳ ತುಂಬು ಗರ್ಭಿಣಿ ನೇಣಿಗೆ ಶರಣು

ದೇವನಹಳ್ಳಿ : ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ನವವಿವಾಹಿತೆ ನೇಣಿಗೆ ಶರಣಾಗಿದ್ದು. ಎರಡು ವರ್ಷದ ಹಿಂದೆ ಮದುವೆಯಾಗಿ ನೂರಾರು ಕನಸಗಳನ್ನು ಕಟ್ಟಿಕೊಂಡಿದ್ದ ಮಹಿಳೆ ರೂಪಾ(29) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದುರಂತದ ವಿಷಯವೆಂದರೆ ಮಹಿಳೆ 6 ತಿಂಗಳ ಗರ್ಭಿಣಿಯಾಗಿದ್ದು. ಇನ್ನು ಜನಿಸದ ಮಗುವು ಕೂಡ ತಾಯಿಯ ಗರ್ಭದಲ್ಲಿಯೆ ಕಣ್ಮುಚ್ಚಿದೆ.

ಎರಡು ವರ್ಷಗಳ ಹಿಂದೆ ರೂಪ ಮತ್ತು ಸುರೇಶ್​ ಪ್ರೀತಿಸಿ ಮದುವೆಯಾಗಿದ್ದರು. ಮದುವೆ ಸಮಯದಲ್ಲಿ ರೂಪ ಕುಟುಂಬಸ್ಥರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿಕೊಟ್ಟಿದ್ದರು ಮತ್ತು ಮದುವೆ ಸಮಯದಲ್ಲಿ ವರದಕ್ಷಿಣೆಯಾಗಿ 100 ಗ್ರಾಂ ಚಿನ್ನಾಭರಣವನ್ನು  ನೀಡಿದ್ದರು. ಆದರೆ ಇತ್ತಿಚೆಗೆ ಮತ್ತೆ ಸುರೇಶ್​ ತನ್ನ ಪತ್ನಿಗೆ ಹಣ ತೆಗೆದುಕೊಂಡು ಬಾ ಎಂದು ಪೀಡುಸುತ್ತಿದ್ದ ಎಂದು ಮಾಹಿತಿ ದೊರೆತಿದೆ. ಇದರಿಂದ ಬೇಸತ್ತ ಪತ್ನಿ ರೂಪ ಇಂದು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ ಎಂದು ಮಾಹಿತಿ ದೊರೆತಿದೆ.

ಸಾಸಲು ಪಂಚಾಯತಿಯಲ್ಲಿ ಡಾಟಾ ಎಂಟರಿ ಆಪರೇಟಿಂಗ್ ಕೆಲಸ ಮಾಡುತ್ತಿದ್ದ ಸುರೇಶ್. ಇತ್ತೀಚೆಗೆ ತನ್ನ ಪತ್ನಿಗೆ ಹಣ ತೆಗೆದುಕೊಂಡು ಬಾ ಎಂದು ಪೀಡಿಸುತ್ತಿದ್ದನು. ಇದಿರಿಂದ ಬೇಸತ್ತ ಪತ್ನಿ ರೂಪ ಡೆತ್​​ನೋಟ್​​ ಬರೆದಿಟ್ಟು ಸಾವನ್ನಪ್ಪಿದ್ದಾರೆ. ನನ್ನ ಸಾವಿಗೆ ಗಂಡ ಸುರೇಶ್, ಮಾವ ನರಸಿಂಹಮೂರ್ತಿ ಮತ್ತು ಅತ್ತೆ ದೇವಮ್ಮ ಕಾರಣ ಎಂದು ಡೆತ್ ನೋಟ್​​​ನಲ್ಲಿ ಬರೆದಿದ್ದು. ದೊಡ್ಡಬೆಳವಂಗಲ ಪೋಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳದ ಪ್ರಕರಣ ದಾಖಲಾಗಿದೆ.

ಗಂಡ ಸುರೇಶನನ್ನು ಪೋಲಿಸರು ವಶಕ್ಕೆ ಪಡೆದಿದ್ದು. ಅತ್ತೆ ಮಾವ ತಲೆಮರಿಸಿಕೊಂಡಿದ್ದಾರೆ ಎಂದು ಮಾಹಿತಿ ದೊರೆತಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES