Monday, January 27, 2025

ದಲಿತ ಮಹಿಳೆ ಕೊಲೆ ಪ್ರಕರಣ: 21 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ತುಮಕೂರು : 2010 ರಲ್ಲಿ ಇಡೀ ರಾಜ್ಯಾದ್ಯಂತ ಗಮನ ಸೆಳೆದಿದ್ದ ದಲಿತ ಮಹಿಳೆ ಕೊಲೆ ಪ್ರಕರಣದಲ್ಲಿ ನ್ಯಾಯಲಯ ತೀರ್ಪು ನೀಡಿದ್ದು. ಕೊಲೆಗೈದಿದ್ದ 21 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ಒಬ್ಬ ಆರೋಪಿಗೆ 13,500 ದಂಡ ವಿಧಿಸಿ ಆದೇಶ ಹೊರಡಿಸಿದೆ.

2010ರ ಜೂನ್​​ 28ರಂದು ತುಮಕೂರು ಜಿಲ್ಲೆಯ, ಚಿಕ್ಕನಾಯಕನಹಳ್ಳಿ ತಾಲೂಕಿನ, ಗೋಪಾಲಪುರ ಗ್ರಾಮದಲ್ಲಿ ಡಾಬಾ ಹೊನ್ನಮ್ಮ ಎಂಬ ಮಹಿಳೆಯನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು. ಸವರ್ಣಿಯರು ಮಹಿಳೆಯ ಮೇಲೆ ಚಪ್ಪಡಿ ಕಲ್ಲನ್ನು ಎತ್ತು ಹಾಕುವ ಮೂಲಕ ಕೊಲೆ ಮಾಡಿದ್ದರು. ಘಟನೆ ಸಂಬಂಧ ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಕೊಲೆ ಹಾಗೂ ಜಾತಿನಿಂದನೆ ಪ್ರಕರಣ ದಾಖಲು ಮಾಡಿ, 27 ಜನರ ಮೇಲೆ ಎಫ್ಐಆರ್ ದಾಖಲು ಮಾಡಲಾಗಿತ್ತು.

ಅಂದಿನ ಡಿವೈಎಸ್​ಪಿ ಶಿವರುದ್ರಸ್ವಾಮಿ ಪ್ರಕರಣದ ತನಿಖೆ ನಡೆಸಿ  ನ್ಯಾಯಲಯಕ್ಕೆ ಜಾರ್ಜಶೀಟ್​​ ಸಲ್ಲಿಸಿದ್ದರು. ಒಟ್ಟು 27 ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಇವರಲ್ಲಿ 6 ಜನರು ಈಗಾಗಲೆ ಮರಣ ಹೊಂದಿದ್ದು. ಉಳಿದ 21 ಜನರ ವಿರುದ್ದ ಇಂದು ನ್ಯಾಯಲಯ ತೀರ್ಪು ನೀಡಿದೆ.

ತುಮಕೂರಿನ 3 ನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ನಾಗಿರೆಡ್ಡಿಯವರು ಇಂದು ತೀರ್ಪು ನೀಡಿದ್ದು. ಒಟ್ಟು 21 ಜನಕ್ಕೆ ಜೀವಾವದಿ ಶಿಕ್ಷೆ ವಿಧಿಸಿದ್ದು ತಲಾ 13,500 ರೂಪಾಯಿಯಂತೆ ಒಟ್ಟು 2 ಲಕ್ಷ 83 ಸಾವಿರ 500 ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ. 21 ಜನರಲ್ಲಿ 19ಜನ ಪುರುಷರಿದ್ದು, ಇಬ್ಬರು ಮಹಿಳೆಯರಿದ್ದಾರೆ ಎಂದು ಮಾಹಿತಿ ದೊರೆತಿದೆ. ಮೃತ ಮಹಿಳೆಯ ಪರವಾಗಿ ಸರ್ಕಾರಿ ಅಭಿಯೋಜಕಿ ಜ್ಯೋತಿ ವಾದ ಮಂಡಿಸಿದರು.

 

RELATED ARTICLES

Related Articles

TRENDING ARTICLES