Wednesday, January 22, 2025

BPL ಕಾರ್ಡ್​ ಪರಿಷ್ಕರಣೆ ತಾತ್ಕಾಲಿಕವಾಗಿ ಸ್ಥಗಿತ : ಕೆ.ಎಚ್​ ಮುನಿಯಪ್ಪ

ಬೆಂಗಳೂರು : ರಾಜ್ಯದಲ್ಲಿ ಬಿಪಿಎಲ್​ಕಾರ್ಡ್ ರದ್ದು ಗೊಂದಲ ವಿಚಾರವಾಗಿ ಸುದ್ದಿಗೋಷ್ಟಿ ನಡೆಸಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್​. ಮುನಿಯಪ್ಪ ‘BPL ಕಾರ್ಡ್​ಗಳನ್ನು ಪರಿಶೀಲಿಸಿ, ಅನರ್ಹರನ್ನು ಮಾತ್ರ APLಗೆ ಸೇರಿಸಲಾಗಿದೆ’ ಎಂದು ಹೇಳಿದರು.

ಆಹಾರ ಸಚಿವ ಕೆ.ಎಚ್ ಮುನಿಯಪ್ಪ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.’ ಯಾವುದೇ ಅರ್ಹ ಬಿಪಿಎಲ್, ಎಪಿಎಲ್ ಕಾರ್ಡ್​ಗಳನ್ನು ರದ್ದು ಮಾಡಿಲ್ಲ. ಕೇವಲ ಬಿಪಿಎಲ್ ಕಾರ್ಡ್ ಪರಿಶೀಲಿಸಿ ಅನರ್ಹರನ್ನ, ಎಪಿಎಲ್​ಗೆ ಸೇರಿಸಲಾಗಿದೆ. ಆದಾಯ ತೆರಿಗೆ ಪಾವತಿ, ಸರ್ಕಾರಿ ನೌಕರರು ಹೊರತುಪಡಿಸಿ ಉಳಿದ ಯಾರದ್ದೇ ಬಿಪಿಎಲ್ ಕಾರ್ಡ್​ಗಳನ್ನು ರದ್ದು ಮಾಡಿಲ್ಲ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಸಚಿವರು’ಅನರ್ಹ ಇರಬಹುದೆನ್ನುವ ಕಾರ್ಡ್ ಗಳನ್ನ ತಾತ್ಕಾಲಿಕವಾಗಿ ಅಮಾನತಿನಲ್ಲಿಡಲಾಗಿದೆ. ಐಟಿಆರ್ ಮಾಡಿರುವ ಕಾರ್ಡ್​ದಾರರನ್ನ ಪರಿಶೀಲಿಸಿ ಎಪಿಎಲ್​ಗೆ ಸೇರಿಸಲಾಗಿದೆ. ಒಂದು ವೇಳೆ ಬಿಪಿಎಲ್ ಗೆ ಅರ್ಹರಿದ್ದು, ಎಪಿಎಲ್ ಆಗಿದ್ದರೆ . ಪುನರ್ ಸ್ಥಾಪಿಸಲು ಕ್ರಮ ತಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಎಂದು ಹೇಳಿದರು.

 

RELATED ARTICLES

Related Articles

TRENDING ARTICLES