Saturday, December 21, 2024

ಬಿಎಂಟಿಸಿ ಚಾಲಕನ ಮೇಲೆ ಅಪರಿಚಿತ ವ್ಯಕ್ತಿಯಿಂದ ಹಲ್ಲೆ

ಬೆಂಗಳೂರು:  ಕರ್ತವ್ಯದಲ್ಲಿದ್ದ ಬಿಎಂಟಿಸಿ ಚಾಲಕನ ಜೊತೆ ಅಪರಿಚಿತ ವ್ಯಕ್ತಿಯೊಬ್ಬ ಕಿರಿಕ್​ ಮಾಡಿದ್ದು. ಬಸ್​​ಗೆ ಹತ್ತಿ ಚಾಲಕನ ಮೇಲೆ  ಹಲ್ಲೆ ಮಾಡಿದ್ದಾನೆ. ಪ್ರಶ್ನಿಸಲು ಬಂದ ಕಂಡೆಕ್ಷರ್​ ಮೇಲೆಯು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಮಾಹಿತಿ ದೊರೆತಿದೆ.

ನೆನ್ನೆ(ನ.20) ಸಂಜೆ 5:40ರ ಸುಮಾರಿಗೆ ಘಟನೆ ನಡೆದಿದ್ದು. ಮೆಜೆಸ್ಟಿಕ್​ ನಿಂದ ಸಿ.ಕೆ.ಪಾಳ್ಯ ಕಡೆಗೆ ಹೋಗುತ್ತಿದ್ದ ಬಸ್​ನಲ್ಲಿ ಘಟನೆ ನಡೆದಿದೆ. ಮೆಜಸ್ಟಿಕ್​ನಿಂದ ಹೊರಟ್ಟಿದ್ದ ಬಸ್​ ನೃಪತುಂಗ ರಸ್ತೆಯಲ್ಲಿ ಹೋಗುತ್ತಿರುವಾಗ ಮ್ಯಾಜಿಸ್ಟ್ರೇಟ್ ಕೋರ್ಟ್ ಬಳಿ ಅಪರಿಚಿತ ವ್ಯಕ್ತಿಯಿಂದ ಕರ್ತವ್ಯಕ್ಕೆ ಅಡ್ಡಿಯಾಗಿದೆ ಎಂದು ದೂರಿದ್ದು. ಬಸ್​​ ಹತ್ತಿದ ಆಘಂತುಕ ಚಾಲಕನನ್ನು ಅವಾಚ್ಯ ಶಬ್ದಗಳಿಂದ  ಹಲ್ಲೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಪ್ರಶ್ನೆ ಮಾಡಲು ಬಂದ ನಿರ್ವಾಹಕನ ಮೇಲೆಯು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು. ಬಸ್​ನಲ್ಲಿದ್ದ ಸಿಸಿಟಿವಿ ಕ್ಯಾಮರದಲ್ಲಿ ಘಟನೆ ಸೆರೆಯಾಗಿದೆ. ಘಟನೆ ಸಂಬಂಧ ಎಫ್ ಐ ಆರ್ ದಾಖಲಾಗಿದ್ದು. ಪೋಲಿಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಮಾಹಿತಿ ದೊರೆತಿದೆ.

 

RELATED ARTICLES

Related Articles

TRENDING ARTICLES