Monday, January 27, 2025

ವಕೀಲ ಕಣ್ಣನ್​ ಕೊ*ಲೆ ಯತ್ನ : 2 ದಿನಗಳ ಕಾಲ ನ್ಯಾಯಲಯ ಬಂದ್​ ಮಾಡಿ ಪ್ರತಿಭಟನೆ

ಅನೇಕಲ್ : ಅನೈತಿಕ ಸಂಬಂಧ ಹಿನ್ನಲೆ ವಕೀಲರೊಬ್ಬರನ್ನು ಕೋರ್ಟ್​ ಆವರಣದಲ್ಲಿಯೆ ಕೊಚ್ಚಿ ಕೊಲೆ ಮಾಡಿಲು ಯತ್ನಿಸಿದ ಘಟನೆಗೆ ಸಂಬಂಧಸಿದಂತೆ ಹೊಸ ಬೆಳವಣಿಗೆಯಾಗಿದ್ದು. ತಮಿಳುನಾಡಿನಲ್ಲಿಇಂದು ಮತ್ತು ನಾಳೆ ವಕೀಲರು ನ್ಯಾಯಲಯವನ್ನು ಬಂದ್​ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ.

ನೆನ್ನೆ ಸಂಜೆ ಘಟನೆ ನಡೆಸಿದ್ದು. ಆನಂದ್​ ಎಂಬ ವ್ಯಕ್ತಿ ಕೋರ್ಟ್​ ಆವರಣದಲ್ಲಿಯೆ ವಕೀಲ​ ಕಣ್ಣನ್​ರನ್ನು ಕೊಲೆ ಮಾಡಲು ಯತ್ನಿಸಿದ್ದನು. ನಡು ರಸ್ತೆಯಲ್ಲಿಯೆ ಮಚ್ಚಿನಿಂದ ತಲೆಗೆ ಹೊಡೆದು ಕೊಲೆ ಮಾಡಲು ಯತ್ನಿಸಿದ್ದನು. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ವಕೀಲನನ್ನು ಸಾರ್ವಜನಿಕರು ಆಸ್ಪತ್ರೆಗೆ ದಾಖಲು ಮಾಡಿದ್ದರು.

ಸದ್ಯ ಆಸ್ಪತ್ರೆಯಲ್ಲಿ ವಕೀಲ ಕಣ್ಣನ್​ ಕೋಮ ಸ್ಥಿತಿಯಲ್ಲಿದ್ದು. ನ್ಯಾಯವಾದಿಯ ಮೇಲಿನ ಹತ್ಯಾಯತ್ನ ಖಂಡಿಸಿ ಹೊಸೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇಂದು ಮತ್ತು ನಾಳೆ ತಮಿಳುನಾಡಿನ ಎಲ್ಲಾ ನ್ಯಾಯಲಯಗಳನ್ನು ಬಂದ್​ ಮಾಡಿ ಪ್ರತಿಭಟನೆ ನಡೆಸಿದ್ದು. ಹೊಸೂರು ಕೋರ್ಟ್​ ಮುಂದೆ ನೂರಾರು ವಕೀಲರು ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ ಮತ್ತು ಕೊಲೆ ಆರೋಪಿ ಆನಂದ್​ ಪರ ಯಾವ ವಕೀಲನು ವಕಾಲತ್​​ ಹಾಕದಂತೆ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಕೊಲೆ ಮಾಡಲು ಯತ್ನಿಸಿದ್ದು ಏಕೆ ? 

ಕೊಲೆ ಆರೋಪಿ ವಕೀಲ ಆನಂದ್​​ ಪತ್ನಿ ಸತ್ಯವತಿ ಜೊತೆ ವಕೀಲ ಕಣ್ಣನ್​​ ಅಕ್ರಮ ಸಂಬಂಧ ಹೊಂದಿದ್ದನು ಎನ್ನಲಾಗಿದೆ. ಇದೇ ಕಾರಣಕ್ಕೆ ನೆನ್ನೆ ಕೊಲೆ ಮಾಡಲು ಯತ್ನಿಸಿದನು ಎಂದು ಮಾಹಿತಿ ದೊರೆತಿದೆ.

ಇಂದು ಹೊಸೂರು ಪೋಲಿಸರು ವಕೀಲ ಆನಂದ್​ ಪತ್ನಿ ಸತ್ಯವತಿಯನ್ನು ಬಂಧಿಸಿದ್ದು. ಸತ್ಯವತಿಯನ್ನು ವಷಕ್ಕೆ ಪಡೆದಿರುವ ಪೋಲಿಸರು ಹೆಚ್ಚಿನ ತನಿಖೆಗೆ ಗುರಿಪಡಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.

 

 

 

RELATED ARTICLES

Related Articles

TRENDING ARTICLES