Monday, December 23, 2024

ಕನ್ನಡ ಬರದ ಶಿಕ್ಷಣ ಮಂತ್ರಿ ಮಧು ಬಂಗಾರಪ್ಪಗೆ ವಿದ್ಯಾರ್ಥಿ ಟಾಂಗ್​

ಬೆಂಗಳೂರು : ಆನ್​ಲೈನ್ ಮೂಲಕ ನೀಡುವ NEET, JEE, CET ಕೋಚಿಂಗ್​ ಕುರಿತು ವಿಧ್ಯಾರ್ಥಿಗಳೊಂದಿಗೆ ಸಂವಾದ ಮಾಡುತ್ತಿದ್ದ ಶಿಕ್ಷಣ ಸಚಿವ ಮಧುಬಂಗಾರಪ್ಪನಿಗೆ ಮುಖಭಂಗವಾಗಿದ್ದು. ವಿಧ್ಯಾರ್ಥಿಯೋರ್ವ ‘ ವಿಧ್ಯಾಮಂತ್ರಿಗೆ ಕನ್ನಡ ಬರಲ್ಲ ಎಂದು ಹೇಳಿ ಶಿಕ್ಷಣ ಮಂತ್ರಿಗಳ ಮರ್ಯಾದಿ ಕಳೆದಿದ್ದಾನೆ

ಶಿಕ್ಷಣ ಸಚಿವ ಮಧು ಬಂಗಾರಪ್ಪ NEET, JEE, CET ಆನ್ ಲೈನ್ ಕೋಚಿಂಗ್ ಕುರಿತು ವಿಧ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದು ಶಿಕ್ಷಣ ಸಚಿವ ಈ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.’ಮಕ್ಕಳ ಪರವಾಗಿ ಇಲಾಖೆ ಪರವಾಗಿ ಸಿದ್ದರಾಮಯ್ಯ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ ಸಚಿವ, ವಿಧ್ಯಾರ್ಥಿಗಳಿಗೆ NEET, JEE, CET ಕೋಚಿಂಗ್​​ ತೆಗೆದುಕೊಳ್ಳುವುದು ಆರ್ಥಿಕವಾಗಿ ಹೊರೆ ಆಗುತ್ತಿದೆ. ಹಾಗಾಗಿ ಸಿಎಂ ಸಿದ್ದರಾಮಯ್ಯ ಅವ್ರು ಆನ್​​ಲೈನ್​​ ಕೋಚಿಂಗ್​​ ಬಗ್ಗೆ ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರೆ. ಎಂದು ಹೇಳಿದರು.

ಮುಂದುವರಿದು ಮಾತನಾಡದಿ ಮಧ ಬಂಗಾರಪ್ಪ’ ಇಂದು ಅದ್ಭುತವಾದ ಕಾರ್ಯಕ್ರಮ ನಾವು ಉದ್ಘಾಟನೆ ಮಾಡ್ತಾ ಇದೀವಿ.ಕೇವಲ ತರಬೇತಿ ಕೊಡುವುದಲ್ಲದೆ. ಪ್ರತಿ ಶನಿವಾರ ಮಕ್ಕಳ ಪ್ರಶ್ನೆಗಳಿಗೆ ಉತ್ತರ ಕೊಡುವುದು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಒಟ್ಟು 25 ಸಾವಿರ ಮಕ್ಕಳಿಗೆ ಉಚಿತ ಆನ್ಲೈನ್ ಟ್ರೇನಿಂಗ ಕೊಡ್ತೀವಿ.

5 ಸಾವಿರ ಆದರ್ಶ ಕಾಲೇಜು ವಿದ್ಯಾರ್ಥಿಗಳಿಗೆ ಟ್ರೇನಿಂಗ್ ಕೊಡಲಾಗುತ್ತೆ. 20000 ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ಕೊಡ್ತಾ ಇದೀವಿ. 25 ಸಾವಿರ ಮಕ್ಕಳು ಹೊರೆತು ಪಡೆಸಿ ಕೂಡ ಬೇರೆ ಮಕ್ಕಳು ಪ್ರಯೋಜನ ಪಡೆದುಕೊಳ್ಳಬಹುದು’ ಎಂದು ಹೇಳಿದರು.

ಕಾರ್ಯಕ್ರಮದ ವೇಳೆ ಶಿಕ್ಷಣ ಸಚಿವರಿಗೆ ಮಂತ್ರಿಗೆ ಮುಖಭಂಗವಾಗಿದ್ದು. ವಿಡಿಯೋ ಕಾನ್ಫರೆನ್ಸ್ ನಡೆಯುತ್ತಿದ್ದ ವೇಲೆ ಕಾಲೇಜಿನ ವಿದ್ಯಾರ್ಥಿಯೊಬ್ಬ ‘ವಿದ್ಯಾಮಂತ್ರಿಗೆ ಕನ್ನಡ ಬರಲ್ಲ’ ಎಂದು ಶಿಕ್ಷಣ ಮಂತ್ರಿಗೆ ಟಾಂಗ್ ನೀಡಿದ್ದಾನೆ. ವಿದ್ಯಾರ್ಥಿ ಈ ರೀತಿಯಾಗಿ ಹೇಳಿದ ತಕ್ಷಣವೇ ಗಲಿಬಿಲಿಗೊಂಡ ಸಚಿವ ಮಧು ಬಂಗಾರಪ್ಪ.

ಕೋಪಗೊಂಡು ‘ಹೇ ಯಾರೋ ಅವನು ಹಾಗೆ ಮಾತನಾಡೋದು ಆ ಅವಿವೇಕಿ ಮಾತನ್ನ ಕೇಳಿಸಿಕೊಳ್ಳಬೇಡಿ ಎಂದು ಹೇಳಿದ್ದಾರೆ. ಅದರ ಜೊತೆಗೆ ವಿಧ್ಯಾರ್ಥಿ ಮೇಲೆ ಸೀರಿಯಸ್ ಆಕ್ಷನ್ ತೆಗೆದುಕೊಳ್ಳಬೇಕು ಎಂದು ಸಚಿವ ಮಧು ಬಂಗಾರಪ್ಪ.

 

RELATED ARTICLES

Related Articles

TRENDING ARTICLES