Monday, December 23, 2024

ಹಾಸ್ಟೆಲ್​ ಮೇಲಿಂದ ಬಿದ್ದು SSLC ವಿದ್ಯಾರ್ಥಿ ಅನುಮಾನಸ್ಪದ ಸಾ*ವು

ಬೆಳಗಾವಿ : ಮುಧೋಳದ ಸಾಯಿ ನಿಕೇತನ ಹಾಸ್ಟೆಲ್ ನಿಂದ ಬಿದ್ದು ಎಸ್ಸೆಸ್ಸೆಲ್ಸಿ ಯುವಕ ಅನುಮಾನಾಸ್ಫದವಾಗಿ ಸಾವನ್ನಪ್ಪಿದ್ದಾನೆ ಎಂದು ಮಾಹಿತಿ ದೊರೆತಿದ್ದು. ಇದು ಆಕಸ್ಮಿಕ ಸಾವಲ್ಲ ಎಂದು ಕುಟುಂಸ್ಥರು ಅನುಮಾನ ವ್ಯಕ್ತಪಡಿಸುದ್ದಾರೆ.

ಬೆಳಗಾವಿ ತಾಲೂಕಿನ ಮುಚ್ಚಂಡಿ ಗ್ರಾಮದ ಯುವಕ ಅಭಿಷೇಕ ಸಂತೋಷ ವಾಲಿಶೆಟ್ಟಿ (16).ಬೆಳಗಾವಿಯಿಂದ ಮುಧೋಳದ ಸಾಯಿನಿಕೇತ ಶಾಲೆಯಲ್ಲಿ ವಿದ್ಯಾಭ್ಯಾಸಕ್ಕೆ ಹೋಗಿದ್ದ. ಮುಧೋಳದಲ್ಲಿರುವ ವಸತಿ ಶಾಲೆಯಲ್ಲಿದ್ದ ವಿಧ್ಯಾರ್ಥೀ ಅಭಿಷೇಕ್​​ ವಾಸವಾಗಿದ್ದನು ಎಂದು ಮಾಹಿತಿ ದೊರೆತಿದೆ. ನವೆಂಬರ್​ 15ರಂದು ವಿದ್ಯಾರ್ಥಿ ಹಾಸ್ಟೆಲ್ ಕಟ್ಟಡ ‌ಮೇಲಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದನು.

ಹಾಸ್ಟಲ್​ ಕಟ್ಟಡದಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಹಾಸ್ಟಲ್​ ಸಿಬ್ಬಂದಿಗಳು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ವಾಪಸ್ ಆಗಿದ್ದರು. ಆದರೆ ಯುವಕ ಅಭಿಷೇಕ್​ ಸಂತೋಶ್​​ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದನು.

ಆದರ ಮೃತ ಅಭಿಷೇಕ್​​ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದು. ಇದು ಆಕಸ್ಮಿಕ ಸಾವಲ್ಲ ಇದೊಂದು ಅನುಮಾನಾಸ್ಪದವಾಗಿದೆ ಎಂದು ಮೃತ ಅಭಿಷೇಕ ತಂದೆ ಸಂತೋಷ ವಾಲಿಶೆಟ್ಟಿ ಮತ್ತು ಕುಟುಂಬಸ್ಥರ ಆಕ್ರೋಶ ವ್ಯಕ್ತಪಡಿಸಿದ್ದು. ಶಾಲೆಯ ಆಡಳಿತ ಮಂಡಳಿ ವಿರುದ್ಧ ಅಭಿಷೇಕ ಕುಟುಂಬಸ್ಥರು ಆರೋಪಿಸಿದ್ದಾರೆ.

ಸೂಕ್ತ ತನಿಖೆ ನಡೆಸಿ ಸಾವಿನ ರಹಸ್ಯ ಹೊರ ತರುವಂತೆ ಕುಟುಂಬಸ್ಥರು ಪೊಲೀಸರಿಗೆ ಒತ್ತಾಯಿಸಿದ್ದು. ಈಗಾಗಲೇ ಅನುಮಾನಾಸ್ಪದ ಸಾವು ಅಂತಾ ಮುಧೋಳ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೋಲಿಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES