ಜಾರ್ಖಂಡ್ : ಜಾರ್ಖಂಡ್ ಚುನಾವಣೆಯು ಅಂತ್ಯಗೊಂಡಿದ್ದು. ಎರಡು ಹಂತದಲ್ಲಿ ನಡೆದ ಚುನಾವಣೆ ಇಂದು ಮುಗಿದಿದೆ. ಸಂಜೆ 5 ಗಂಟೆ ವೇಳೆಗೆ ಒಟ್ಟು 67% ಮತದಾನವಾಗಿದೆ ಎಂದು ಮಾಹಿತಿ ದೊರೆತಿದ್ದು. ಮತದಾನದ ಪ್ರಮಾಣದಲ್ಲಿ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮಾಹಿತಿ ದೊರೆತಿದೆ.
ಆಡಳಿತರೂಡ JMM ಪಕ್ಷ ಅಧಿಕಾರ ಕಳೆದುಕೊಳ್ಳಲಿದೆ ಎಂದು ಸಮೀಕ್ಷೆ ವರದಿಗಳು ಭವಿಷ್ಯ ನುಡಿದಿದ್ದು. ಹಗರಣಗಳ ಸರಮಾಲೆಯನ್ನು ಹೊತ್ತಿಕೊಂಡಿದ್ದ JMM ಪಕ್ಷ ಅಧಿಕಾರ ಕಳೆದುಕೊಳ್ಳಲಿದೆ ಎಂದು ಮಾಹಿತಿ ದೊರೆತಿದೆ.
- ಪೀಪಲ್ಸ್ ಪಲ್ಸ್ ಸಮೀಕ್ಷೆ ಬಿಜೆಪಿ ನೇತೃತ್ವ ಸರ್ಕಾರಕ್ಕೆ ಸುಲಭ ಬಹುಮತ ಬರುತ್ತದೆ ಎಂದು ವರದಿ ನೀಡಿದ್ದು BJP ಗೆ 44 ರಿಂದ 53 ಸ್ಥಾನಗಳು, Cong+ಗೆ 25 ರಿಂದ 37 ಕ್ಷೇತ್ರಗಳು ಮತ್ತು ಇತರೆಗೆ 05 ರಿಂದ 09 ಕ್ಷೇತ್ರಗಳಲ್ಲಿ ಜಯಭೇರಿಗಳಿಸಲಿದೆ ಎಂದು ಮಾಹಿತಿ ದೊರೆತಿದೆ.
- ಟೈಮ್ಸ್ ನೌ ಸಮೀಕ್ಷೆಯಲ್ಲಿ BJPಗೆ ರಿಂದ 40 ರಿಂದ 44, Cong+ಗೆ 30 ರಿಂದ 40 ಮತ್ತು ಇತರರಿಗೆ 00 ರಿಂದ 01 ಸ್ಥಾನಗಳು ಬರಲಿದೆ ಎಂದು ವರದಿ ದೊರೆತಿದೆ.
- ಚಾಣಕ್ಯ ಸಮೀಕ್ಷೆಯಲ್ಲಿ BJP ಗೆ 45 ರಿಂದ 50, Cong+ 35 ರಿಂದ 38 ಮತ್ತು ಇತರರಿಗೆ 03 ರಿಂದ 05 ಕ್ಷೇತ್ರಗಳಲ್ಲಿ ಜಯ ಗಳಿಸಲಿಸದೆ ಎಂದು ಮಾಹಿತಿ ದೊರೆತಿದೆ.
- ಆಕ್ಸಸ್ ಮೈ ಇಂಡಿಯಾ ಸಮೀಕ್ಷೆಯಲ್ಲಿ BJPಗೆ 25 , Cong+ಗೆ 53 ಮತ್ತು ಇತರರಿಗೆ 03 ಕ್ಷೇತ್ರಗಳಲ್ಲಿ ಜಯ ಗಳಿಸಲಿದೆ ಎಂದು ಮಾಹಿತಿ ದೊರೆತಿದೆ.
- ಪಿ ಮಾರ್ಕ್ ಸಮೀಕ್ಷೆಯಲ್ಲಿ BJPಗೆ 31 ರಿಂದ 40, Cong+ 37 ರಿಂದ 47 ಮತ್ತು ಇತರರಿಗೆ 01 ರಿಂದ 06 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಮಾಹಿತಿ ದೊರೆತಿದೆ.
ಒಟ್ಟಾರೆಯಾಗಿ ಜಾರ್ಖಂಡ್ನಲ್ಲಿ ಕೇವಲ ಒಂದು ಸಮೀಕ್ಷೆಯಲ್ಲಿ ಮಾತ್ರ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರ ಹಿಡಿಯಲಿದೆ ಎಂದು ಹೇಳಿದ್ದು. ಉಳಿದಲ್ಲಾ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಮಾಹಿತ ದೊರೆತಿದೆ.