Tuesday, December 24, 2024

ರಾಷ್ಟ್ರ ರಾಜಧಾನಿಯಲ್ಲಿ ಶುರುವಾಗುತ್ತೆ ನಂದಿನಿ ಕಮಾಲ್

ಬೆಂಗಳೂರು : ದೆಹಲಿಯಲ್ಲಿರುವ ಕನ್ನಡಿಗರಿಗೊಂದು ಖುಷಿ ಸುದ್ದಿ ಬಂದಿದ್ದು. ರಾಷ್ಟ್ರ ರಾಜಧಾನಿಯಲ್ಲಿಯು ಇನ್ನು ಮುಂದೆ ನಂದಿನಿ ಉತ್ಪನ್ನಗಳು ದೊರೆಯಲಿದೆ ಎಂದು ಮಾಹಿತಿ ದೊರೆತಿದೆ.

ನವೆಂಬರ್ 21 ರಿಂದ ದೆಹಲಿಯಲ್ಲಿ‌ ಕರ್ನಾಟಕದ ಕೆಎಂಎಫ್ ಹಾಲು ಸಿಗಲಿದೆ ಎಂದು ಮಾಹಿತಿ ದೊರೆತಿದ್ದು. ಅಮೂಲ್, ಮದರ್ ಡೈರಿ ಮಾರುಕಟ್ಟೆಗೆ ಕೆಎಂಎಫ್ ಲಗ್ಗೆ ಇಟ್ಟಿದೆ. ದೆಹಲಿ ಸರ್ಕಾರದ ಮನವಿಯ ಮೇರೆಗೆ ಹಸುವಿನ ಹಾಲು ಪೂರೈಕೆಗೆ ಕೆಎಂಎಫ್‌ ಸಿದ್ದತೆ ನಡೆಸಿದ್ದು. ನವೆಂಬರ್​​ 21ರಿಂದ ದೆಹಲಿಯಲ್ಲಿ ನಂದಿನಿ ಹಾಲು ದೊರೆಯಲಿದೆ ಎಂದು ಮಾಹಿತಿ ದೊರೆತಿದೆ.

ಇದೀಗ ನವೆಂಬರ್-21ರಿಂದ  ಪ್ರತಿ ನಿತ್ಯ1 ಲಕ್ಷ ಲೀಟರ್ ಹಾಲನ್ನು ದೆಹಲಿಗೆ ಕಳುಹಿಸಲಿರುವ ಕೆಎಂಎಫ್​​  5 ಲಕ್ಷ ಹಾಲು ಪೂರೈಸುವ ಗುರಿ ಇಟ್ಟಿಕೊಂಡಿದೆ ಎಂದು ಕೆಎಂಎಫ್​​ ಆಡಳಿತ ಮಂಡಳಿ ಮಾಹಿತಿ ದೊರೆತಿದೆ. 29 ವರ್ಷಗಳ ಹಿಂದೆ ದೆಹಲಿಗೆ ಹಸುವಿನ ಹಾಲು ಪೂರೈಕೆ ಮಾಡ್ತಿದ್ದ ಕೆಎಂಎಫ್ ಬಳಿಕ ಕಾರಣಾಂತರಗಳಿಂದಾಗಿ ಹಾಲು ಪೂರೈಕೆ  ಸ್ಥಗಿತಗೊಳಿಸಿತ್ತು ಆದ್ರೆ ಇದೀಗ ಪುನಃ ರಾಜ್ಯದ ಹಸುವಿನ ಹಾಲಿಗೆ ದೆಹಲಿಯಿಂದ ಬೇಡಿಕೆ ಹೆಚ್ಚಿದ್ದು ಹೀಗಾಗಿ ನಾಳೆಯಿಂದ ದೆಹಲಿಗೆ ಹಾಲು ಪೂರೈಕೆ ಮಾಡಲು ಸಿದ್ದತೆ ನಡೆಸಲಾಗಿದೆ ಎಂದು ಮಾಹಿತಿ ದೊರೆತಿದೆ.

ಈಗಾಗಲೇ ತಮಿಳುನಾಡು, ಆಂಧ್ರ,  ಮಹಾರಾಷ್ಟ್ರ, ಕೇರಳ ರಾಜ್ಯಕ್ಕೆ ಹಾಲು ಪೂರೈಕೆ ಮಾಡುತ್ತಿರುವ ಕೆಎಂಎಫ್ ಇದೀಗ ರಾಷ್ಟ್ರ ರಾಜಧಾನಿಯಲ್ಲಿಯು ಕಮಾಲ್​ ಮಾಡಲು ಮುಂದಾಗಿದೆ ಎಂದು ಮಾಹಿತಿ ದೊರೆತಿದೆ.

 

RELATED ARTICLES

Related Articles

TRENDING ARTICLES