Sunday, December 22, 2024

ಮಹರಾಷ್ಟ್ರ ಚುನಾವಣೆ : ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಅಧಿಕಾರ ಎಂದ ಚುನಾವಣಾ ನಂತರ ಸಮೀಕ್ಷೆ

ಮುಂಬೈ : ಮಹಾರಾಷ್ಟ್ರ ಚುನಾವಣೆ ಅಂತ್ಯಗೊಂಡಿದ್ದು. ಒಂದೇ ಹಂತದಲ್ಲಿ ಮಹರಾಷ್ಟ್ರ ಚುನಾ  ಚುನಾವಣೆ ಮುಗಿದಿದೆ. ಸಂಜೆ 5 ಗಂಟೆ ವೇಳೆಗೆ ಮಹರಾಷ್ಟ್ರದಲ್ಲಿ ಒಟ್ಟು 58% ಮತದಾನವಾಗಿದೆ ಎಂದು ಮಾಹಿತಿ ದೊರೆತಿದ್ದು. ಈ ಬಾರಿಯು ಕೂಡ ಮಹರಾಷ್ಟ್ರದ ಜನ ಮತದಾನ ಮಾಡಲು ನಿರಾಸಕ್ತಿ ತೋರಿಸಿದ್ದಾರೆ.

ಸಂಜೆ 6;30ರ ವೇಳೆಗೆ ವಿವಿಧ ಸಂಸ್ಥೆಗಳು ನಡೆಸಿದ್ದ ಚುನಾವಣಾ ನಂತರ ಸಮೀಕ್ಷೆಗಳು ಬಹಿರಂಗವಾಗಿದ್ದು. ಬಹುತೇಕ ಎಲ್ಲಾ ಸಮೀಕ್ಷೆಗಳು ಈ ಬಾರಿ ಮಹರಾಷ್ಟ್ರದ ಗದ್ದುಗೆ ಬಿಜೆಪಿ ನೇತೃತ್ವದ ಮೈತ್ರಿ ಕೂಟಕ್ಕೆ ಅಧಿಕಾರ ದೊರೆಯಲಿದೆ ಎಂದು ಭವಿಷ್ಯ ನುಡಿದಿವೆ.

  •  ಪೀಪಲ್ಸ್​​ ಪಲ್ಸ್​​ ಸಮೀಕ್ಷೆ ಬಿಜೆಪಿ ನೇತೃತ್ವ ಸರ್ಕಾರಕ್ಕೆ ಸುಲಭ ಬಹುಮತ ಬರುತ್ತದೆ ಎಂದು ವರದಿ ನೀಡಿದ್ದು BJP ಗೆ 175 ರಿಂದ 195 ಸ್ಥಾನಗಳು, Congಗೆ 85 ರಿಂದ 112 ಕ್ಷೇತ್ರಗಳು ಮತ್ತು ಇತರೆಗೆ 7 ರಿಂದ 12 ಕ್ಷೇತ್ರಗಳಲ್ಲಿ ಜಯಭೇರಿಗಳಿಸಲಿದೆ ಎಂದು ಮಾಹಿತಿ ದೊರೆತಿದೆ.
  • ಮ್ಯಾಟ್ರೀಜ್​ ಸಮೀಕ್ಷೆಯಲ್ಲಿ BJPಗೆ 150 ರಿಂದ 170, ಕಾಂಗ್ರೆಸ್​​ಗೆ 110 ರಿಂದ 130 ಮತ್ತು ಇತರರಿಗೆ 8 ರಿಂದ 10 ಸ್ಥಾನಗಳು ಬರಲಿದೆ ಎಂದು ವರದಿ ದೊರೆತಿದೆ.
  • ಚಾಣಕ್ಯ ಸಮೀಕ್ಷೆಯಲ್ಲಿ BJP ಗೆ 137 ರಿಂದ 157, ಕಾಂಗ್ರೆಸ್​ಗೆ 126 ರಿಂದ 146 ಮತ್ತು ಇತರರಿಗೆ 02 ರಿಂದ 08 ಕ್ಷೇತ್ರಗಳಲ್ಲಿ ಜಯ ಗಳಿಸಲಿಸದೆ ಎಂದು ಮಾಹಿತಿ ದೊರೆತಿದೆ.
  • ಸಿಎನ್​​ಎನ್​​ ಸಮೀಕ್ಷೆಯಲ್ಲಿ BJPಗೆ 154, congಗೆ 128 ಮತ್ತು ಇತರರಿಗೆ 08 ಕ್ಷೇತ್ರಗಳಲ್ಲಿ ಜಯ ಗಳಿಸಲಿದೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES