Wednesday, January 22, 2025

PG ಊಟದಲ್ಲಿ ಜೀವಂತ ಇಲಿ ಪತ್ತೆ : ಆಹಾರ ಸುರಕ್ಷತಾ ಇಲಾಖೆಯಿಂದ ನೊಟೀಸ್

ಬೆಂಗಳೂರು : ರಾಜಧಾನಿಯ ಪಿಜಿಗಳಲ್ಲಿ ಅವ್ಯವಸ್ಥೆಯೆಂಬುದು ಮತ್ತೆ ಮುಂದುವರಿದಿದ್ದು. ಪಿಜಿಯಲ್ಲಿ ನೀಡುವ ಊಟದಲ್ಲಿ ಜೀವಂತ ಇಲಿ ಪತ್ತೆಯಾಗಿದೆ ಎಂಬ ಆಘಾತಕಾರಿಯಾದ ವರದಿ ದೊರೆತಿದೆ.

ಬಿಟಿಎಂ ಲೇಔಟ್ ನ ಡಿಆರ್‌ಬಿ ಕಂಫರ್ಟ್ಸ್ ಪಿಜಿಯಲ್ಲಿ ನಡೆದ ಘಟನೆ ನಡೆದಿದ್ದು. ಊಟಕ್ಕೆ ಬಂದ ಪಿಜಿ ನಿವಾಸಿಗಳು ಮುಚ್ಚಳ ತೆಗೆಯುತ್ತಿದ್ದಂತೆ ಇಲಿಯ ದರ್ಶನವಾಗಿದೆ.  ಇಲಿ ಜೊತೆಗೆ ಊಟದಲ್ಲಿ ಹುಳಗಳೂ ಪತ್ತೆಯಾಗಿದ್ದು ಪಿಜಿ ನಿವಾಸಿಗಳು ಕಂಗಾಲಾಗಿದ್ದಾರೆ.

ಆಹಾರ ಇಲಾಖೆಯಿಂದ ನೋಟಿಸ್​​ ಜಾರಿ 

PGಗಳಲ್ಲಿ ಕಳಪೆ ಊಟ, ಸ್ವಚ್ಛತೆ ಕಾಪಾಡದ ಹಿನ್ನೆಲೆ ಬೆಂಗಳೂರಿನ‌ 41 ಪಿಜಿಗಳಿಗೆ ಆಹಾರ ಸುರಕ್ಷತೆ & ಗುಣಮಟ್ಟ ಇಲಾಖೆಯಿಂದ  ನೊಟೀಸ್ ನೀಡಿದ್ದು. ರಾಜ್ಯಾದ್ಯಂತ ಪಿಜಿಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದೆ ಎಂದು ಮಾಹಿತಿ ದೊರೆತಿದೆ.

ಸ್ವಚ್ಛತೆ & ಕಳಪೆ ಊಟದ ಆಹಾರ ಬಗ್ಗೆ ಸಾಲು ಸಾಲು ದೂರುಗಳು ಕೇಳಿ ಬಂದ ಹಿನ್ನಲೆ ರಾಜ್ಯದ್ಯಂತ 305 ಪಿಜಿಗಳ ಮೇಲೆ ದಾಳಿ ಮಾಡಿ ಪರಿಶೀಲನೆ‌ ನಡೆಸಿದ್ದು. 305 ಪಿಜಿಗಳ ಪೈಕಿ 127 ಪಿಜಿಗಳಿಗೆ ನೊಟೀಸ್ ನೀಡಿದ್ದು.  ಈ ಪಿಜಿಗಳಿಗೆ 21 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ ಎಂದು ಮಾಹಿತ ದೊರೆತಿದೆ.

RELATED ARTICLES

Related Articles

TRENDING ARTICLES