Wednesday, January 22, 2025

ಮಹಾರಾಷ್ಟ್ರದ 288 ಕ್ಷೇತ್ರಗಳಿಗೆ ಸಾರ್ವತ್ರಿಕ ಚುನಾವಣೆ: ಚುನಾವಣ ಕಣದಲ್ಲಿ ಘಟಾನುಘಟಿಗಳು

ಮುಂಬೈ : ಮಹಾರಾಷ್ಟ್ರದಲ್ಲಿಂದು ಎಲ್ಲಾ 288 ಕ್ಷೇತ್ರಗಳಿಗೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು. ಮಹಾರಾಷ್ಟ್ರ ವಿಧಾನಸಭೆಗೆ ಒಂದೇ ಹಂತದಲ್ಲಿಮತದಾನ ನಡೆಯಲಿದೆ. ಒಟ್ಟು 288 ಸ್ಥಾನಗಳಿಗೆ ಒಟ್ಟು 4,136 ಮಂದಿ ಸ್ಪರ್ಧೆ ಮಾಡಿದ್ದಾರೆ ಎಂದು ಮಾಹಿತಿ ದೊರೆತಿದೆ.

ಒಟ್ಟು ಸ್ಪರ್ಧಿಗಳಲ್ಲಿ  2,086 ಸ್ವತಂತ್ರ ಅಭ್ಯರ್ಥಿಗಳು ಕಣದಲ್ಲಿದ್ದು. ಸ್ಥಳೀಯ ಪಕ್ಷಗಳು ಹಾಗೂ ವಿವಿಧ ಪಕ್ಷಗಳ ಬಂಡಾಯ ಅಭ್ಯರ್ಥಿಗಳ ಸ್ವತಂತ್ರವಾಗಿ ಸ್ಪರ್ಧೆ ಮಾಡಿದ್ದಾರೆ. ಇದರಿಂದಾಗಿ ರಾಷ್ಟ್ರೀಯ ಪಕ್ಷಗಳ ಮತ ವಿಭಜನೆಯಾಗುವ ಸಾಧ್ಯತೆ ಇದೆ ಎಂದು ಮಾಹಿತಿ ದೊರೆತಿದೆ. ಈ ಸಲ 9 ಕೋಟಿ 63 ಲಕ್ಷ ಮತದಾರರು ನೋಂದಣಿಯಾಗಿದ್ದಾರೆ ಎಂದು ಮಾಹಿತಿ ದೊರೆತಿದೆ.

ಮತದಾನಕ್ಕಾಗಿ ಕೇಂದ್ರ ಚುನಾವಣಾ ಆಯೋಗ 1,00,186 ಮತಗಟ್ಟೆಗಳ ಸ್ಥಾಪನೆ ಮಾಡಿದ್ದು. ಸುಮಾರು 6 ಲಕ್ಷ ಸರ್ಕಾರಿ ನೌಕರರು ಚುನಾವಣಾ ಕರ್ತವ್ಯದಲ್ಲಿ ಭಾಗಿಯಾಗಲಿದ್ದಾರೆ. ಮಹಾಯುತಿ ಮೈತ್ರಿಕೂಟದಿಂದ  ಬಿಜೆಪಿ 149 ಕ್ಷೇತ್ರಗಳಲ್ಲಿ, ಶಿವಸೇನೆ (ಶಿಂಧೆ ಬಣ) 81, ಎನ್‌ಸಿಪಿ (ಅಜಿತ್‌ ಪವಾರ್ ಬಣ) 59 ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ,

ಎಂವಿಎ (ಮಹಾವಿಕಾಸ್​​ ಅಘಾಡಿ) ನಲ್ಲಿ ಕಾಂಗ್ರೆಸ್‌ 101, ಶಿವಸೇನೆ (ಉದ್ಧವ್‌ ಬಣ) 95 ಮತ್ತು ಎನ್‌ಸಿಪಿ (ಶರದ್ ಪವಾರ್ ಬಣ) 86 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿವೆ ಎಂದು ಮಾಹಿತಿ ದೊರೆತಿದೆ. ಇಂದು ಮತದಾನ ನಡೆದು ನವೆಂಬರ್ 23 ರಂದು ಫಲಿತಾಂಶ ಪ್ರಕಟವಾಗಲಿದೆ.

ಮಹಾರಾಷ್ಟ್ರದಲ್ಲಿ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ, ಏಕನಾಥ ಶಿಂಧೆ ನೇತೃತ್ವದ ಶಿವಸೇನೆ, ಅಜಿತ್‌ ಪವಾರ್‌ ಬಣದ ಎನ್‌ಸಿಪಿ ಹಲವು ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡಿದ್ದು. ಅದೇ ರೀತಿ ಮತದಾರರನ್ನು ಸೆಳೆಯಲು ಮಹಾವಿಕಾಸ ಅಘಾಡಿ ಸಹ ಗ್ಯಾರೆಂಟಿಗಳ ಮೂಲಕ ಪ್ರಯತ್ನ ನಡೆಸಿದೆ. ಒಟ್ಟಾರೆಯಾಗಿ ಈ ಬಾರಿಯ ಚುನಾವಣೆ ಬಾರೀ ಕುತೂಹಳವನ್ನು ಕೆರೆಳಿಸಿದೆ.

ಮಹಾರಾಷ್ಟ್ರ ಚುನಾವಣೆಯಲ್ಲಿ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು

ಸಿಎಂ .ಏಕನಾಥ್‌ ಶಿಂಧೆ, (ಕೊಪ್ರಿ-ಪಚ್ಚಕ್ಕಾಡಿ),
ಡಿಸಿಎಂ .ದೇವೇಂದ್ರ ಫಡ್ನವಿಸ್‌ (ನಾಗಪುರ ನೈರುತ್ಯ)
ಡಿಸಿಎಂ .ಅಜಿತ್‌ ಪವಾರ್‌ (ಬಾರಾಮತಿ)
ಮಿಲಿಂದ್‌ ದಿಯೋರಾ (ವರ್ಲಿ)
ಆದಿತ್ಯ ಠಾಕ್ರೆ (ವರ್ಲಿ)
ಚಂದ್ರಶೇಖರ್‌ ಬಾವಾಂಕುಲೆ (ಕಾಮ್ತಿ)
ನವಾಬ್‌ ಮಲಿಕ್‌ (ಮಂಖುರ್ದ್‌ ಶಿವಾಜಿನಗರ)
ಪೃಥ್ವಿರಾಜ್‌ ಚೌಹಾಣ್‌ (ಕರದ್‌ ದಕ್ಷಿಣ)
ಛಗನ್‌ ಭುಜಬಲ್‌ (ಯೆವ್ಲಾ)

ಮುಂತಾದ ಘಟಾನುಘಟಿಗಳು ಈ ಬಾರಿಯ ಚುನಾವಣ ಕಣದಲ್ಲಿದ್ದಾರೆ.

RELATED ARTICLES

Related Articles

TRENDING ARTICLES