Monday, December 23, 2024

ಜಾರ್ಖಂಡ್​​ನಲ್ಲಿಂದು ಕೊನೆ ಹಂತದ ಚುನಾವಣೆ : ಅಧಿಕಾರ ಹಿಡಿಯಲು ಬಿಜೆಪಿಯಿಂದ ಶತಪ್ರಯತ್ನ

ರಾಂಚಿ : ಜಾರ್ಖಂಡ್‌ನ‌ಲ್ಲಿಂದು ಕೊನೆ ಹಂತದ ಮತದಾನ ನಡೆಯುತ್ತಿದ್ದು. ಒಟ್ಟು 38 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈಗಾಗಲೇ 43 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನವೆಂಬರ್ 13ರಂದು ನಡೆದಿದ್ದು. ಎರಡನೇ ಹಂತದಲ್ಲಿ ಒಟ್ಟು 1ಕೋಟಿ, 23 ಲಕ್ಷ ಮತದಾರರಿಂದ ಮತದಾನ ನಡೆಯಲಿದೆ.

ಇಂದು ನಡೆಯುವ ಚುನಾವಣೆಯಲ್ಲಿ ಒಟ್ಟಾರೆ 528 ಅಭ್ಯರ್ಥಿಗಳ ಚುನಾವಣಾ ಕಣದಲ್ಲಿದಲ್ಲಿದ್ದು. ಚುನಾವಣಾ ಆಯೋಗದಿಂದ ಮತದಾನಕ್ಕಾಗಿ 14 ಸಾವಿರ ಮತಗಟ್ಟೆಗಳನ್ನು ನಿರ್ಮಾಣ ಮಾಡಲಾಗಿದೆ. ಇವುಗಳಲ್ಲಿ 7 ಸಾವಿರ ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತ ಮಾಡಿದ್ದು. ಶಾಂತಿಯುತ ಮತದಾನಕ್ಕಾಗಿ ಕೇಂದ್ರ ಮೀಸಲು ಪಡೆಯ 600 ತುಕಡಿಗಳ ನಿಯೋಜನೆ ಮಾಡಲಾಗಿದೆ.

ಸಿಎಂ ಹೇಮಂತ್‌ ಸೊರೇನ್‌, ಕಲ್ಪನಾ ಸೊರೇನ್‌, ವಿಧಾನಸಭೆ ಸ್ಪೀಕರ್‌ ರವೀದ್ರನಾಥ್‌ ಮಹ್ತೊ, ಜೆಎಂಎಂ(JMM) ಪಕ್ಷದ ಪ್ರಮುಖ ಅಭ್ಯರ್ಥಿಗಳಾಗಿದ್ದು. ಎಎಸ್‌ಜೆಯು(ASJU) ಯಿಂದ ಅಧ್ಯಕ್ಷ ಸುದೇಶ್‌ ಕುಮಾರ್‌ ಮಹ್ತೊ ಕಣದಲ್ಲಿದ್ದಾರೆ. ಉಳಿದಂತೆ ಮಾಜಿ ಸಿಎಂ ಚಂಪೈ ಸೊರೇನ್‌, ಬಾಬುಲಾಲ್‌ ಮರಾಂಡಿ, ಅಮರ್‌ನಾಥ್‌ ಬೌರಿ, ಬಿಜೆಪಿಯಿಂದ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು ಎಂದು ಮಾಹಿತಿ ದೊರೆತಿದೆ.

ಇಂಡಿಯಾ ಮೈತ್ರಿಕೂಟಕ್ಕೆ ಇದು ಮಹತ್ವದ ಚುನಾವಣೆಯಾಗಿದ್ದು. NDA ಕೂಡ ಮತ್ತೂಮ್ಮೆ ಅಧಿಕಾರ ಹಿಡಿಯಲು ಸಹ ಸಕಲ ಸಿದ್ಧತೆಯನ್ನು ನಡೆಸಿದೆ. ಬಿಜೆಪಿ ನೇತೃತ್ವದ ಎನ್‌ಡಿಎ 2019 ರಲ್ಲಿ ಕಳೆದುಕೊಂಡ ಅಧಿಕಾರ ಮರಳಿ ಪಡೆಯಲು ಪ್ರಯತ್ನಿಸುತ್ತಿದ್ದು. ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ, ನಡ್ಡಾ, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆರಂತಹ ಘಟಾನುಘಟಿಗಳು ಈ ಬಾರಿಯ ಚುನಾವಣೆಯಲ್ಲಿ  ಪ್ರಚಾರ ನಡೆಸಿದ್ದು ಈ ಸಲದ ಚುನಾವಣೆ ಭಾರಿ ಕುತೂಹಲ ಮೂಡಿಸಿದೆ

RELATED ARTICLES

Related Articles

TRENDING ARTICLES