Saturday, December 21, 2024

‘ಸೆರೆಂಡರ್​​ ಆಗದಿದ್ದಕ್ಕೆ ಎನ್​ಕೌಂಟರ್​ ಮಾಡಿದ್ದಾರೆ’: ವಿಕ್ರಮ್​ಗೌಡ ಬಗ್ಗೆ ಶಾಕಿಂಗ್​ ಹೇಳಿಕೆ ಕೊಟ್ಟ ಸಿಎಂ

ಬೆಂಗಳೂರು: ನಕ್ಸಲ್​​ ವಿಕ್ರಮ್ ಗೌಡ​​ ಎನ್​​ಕೌಂಟರ್​​ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ. ಅವನಿಗೆ ಸೆರೆಂಡರ್​ ಆಗೋದಕ್ಕೆ ಹೇಳಿದರು ಆತ ಶರಣಾಗಿಲ್ಲ ಅದಕ್ಕೆ ಆತನನ್ನು ಎನ್​​ಕೌಂಟರ್​ ಮಾಡಿದ್ದಾರೆ. ಆತನಿಗಾಗಿ ಕೇರಳ ಸೇರಿದಂತೆ ನಮ್ಮ ಸರ್ಕಾರವು ಬಹುಮಾನ ಘೋಷಣೆ ಮಾಡಿತ್ತು ಎಂದು ಹೇಳಿದರು.

ನಕ್ಸಲ್​​ ವಿಕ್ರಮ್​​ ಗೌಡನ ಬಗ್ಗೆ ಮಾತನಾಡಿದ ಸಿಎಂ. ಆತ ಶರಣಾಗದಿದ್ದಕ್ಕೆ ANF ಇಂತಹ ಕ್ರಮಕ್ಕೆ ಮುಂದಾಗಿದೆ. ಆತನಿಗಾಗಿ ಕೇರಳ ಮತ್ತು ನಮ್ಮ ಸರ್ಕಾರ ಬಹುಮಾನ ಘೋಷಣೆ ಮಾಡಿತ್ತು. ಎನ್​ಕೌಂಟರ್​​ ಮಾಡಿದನ್ನ ನೀವು ಪ್ರಶಂಸಿಸಬೇಕು ಎಂದು ಹೇಳಿದ ಸಿಎಂ. ನಕ್ಸಲಿಸಂ ಇರಬೇಕೋ, ಹೋಗಬೇಕೋ ಎಂದು ನೀವೆ ಹೇಳಿ? ಎಂದು ಪರ್ತಕರ್ತರಿಗೆ ಪ್ರಶ್ನೆ ಕೇಳಿದರು.

ನಬಾರ್ಡ್​ನಿಂದ ಕಡಿಮೆ ಸಾಲಕೊಡುತ್ತಿದ್ದಾರೆ ಎಂದ ಸಿಎಂ

ನಾಳೆ ದೆಹಲಿ ಪ್ರವಾಸ ಕೈಗೊಂಡಿರುವ ಸಿಎಂ ಸಿದ್ದರಾಮಯ್ಯ. ಈ ಬಾರಿ ನರ್ಬಾಡ್​​ ಬ್ಯಾಂಕ್​ನಿಂದ ಕಡಿಮೆ ಹಣ ನೀಡಿರುವ ವಿಷಯದ ಕುರಿತು ನಿರ್ಮಲ ಸೀತಾರಾಮ ಅವರನ್ನು ಭೇಟಿಯಾಗುತ್ತೇನೆ ಎಂದು ಹೇಳಿದರು.

ನಬಾರ್ಡ್ ನಿಂದ ಸಾಲ ಕೋಡೋದು ಕಡಿಮೆ ಮಾಡಿದ್ದಾರೆ ಎಂದು ಹೇಳಿದ ಸಿಎಂ ಸಿದ್ದರಾಮಯ್ಯ. ಕಳೆದ ಸಲ  ಕೋಟಿ ಕೊಟ್ಟಿದ್ದರು 5600 ಕೋಟಿ ಸಾಲ ನೀಡಿದ್ದರು. ಆದರೆ ಈ ವರ್ಷ ಕೇವಲ 2360 ಕೋಟಿ ಕೊಟ್ಟಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಸುಮಾರು 58% ಕಡಿಮೆ ಕೊಟ್ಟಿದ್ದಾರೆ. ಅದಕ್ಕೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಮನವಿ ಮಾಡುತ್ತೇವೆ ಎಂದು ಹೇಳಿದರು.

ಹೈಕಮಾಂಡ್ ಭೇಟಿ ಮಾಡುವ ವಿಚಾರವಾಗಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ‘ಹೈಕಮಾಂಡ್​ ಭೇಟಿ ಮಾಡುವ ಬಗ್ಗೆ ಇನ್ನು ತೀರ್ಮಾನ ಮಾಡಿಲ್ಲ, ನಾಳೆ ಸಾಯಂಕಾಲ ನೋಡುತ್ತೇನೆ ಟೈಮ್ ಸಿಕ್ಕರೆ ಭೇಟಿ ಮಾಡುತ್ತೇನೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES