Wednesday, January 22, 2025

ಮೂಡಾ ಪ್ರಕರಣ ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ ದೇವರಾಜು

ಮೈಸೂರು : ಮೂಡಾ ಪ್ರಕರಣದಲ್ಲಿ ಹೊಸ ಬೆಳವಣಿಗೆಯಾಗಿದ್ದು. ಮೂಡಾ ಪ್ರಕರಣದ A4 ಆರೋಪಿ  ದೇವರಾಜು ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ಮೂಡಾ ಪ್ರಕರಣದಲ್ಲಿ ಎ4 ಆರೋಪಿಯಾಗಿರುವ ದೇವರಾಜು ಸಿದ್ದರಾಮಯ್ಯನ ಬಾಮೈದ ಮಲ್ಲಿಕಾರ್ಜುನರಿಗೆ 2004ರಲ್ಲಿ ಜಮೀನು ಮಾರಿದ್ದರು. ಇದೇ ಜಮೀನನ್ನು ಮಲ್ಲಿಕಾರ್ಜನ ತನ್ನ ತಂಗಿಗೆ ಅರಿಶಿಣ-ಕುಂಕುಮದ ರೀತಿಯಲ್ಲಿ ಜಮೀನನ್ನು ಉಡುಗೊರೆಯಾಗಿ ನೀಡಿದ್ದರು. ನಂತರ ಇದೇ ಜಮೀನನ್ನು ಮೂಡ ವಷಪಡಿಸಿಕೊಂಡು ಅದರಲ್ಲಿ ಸೈಟ್​ ಮಾಡಿ ಹಂಚಿದೆ. ಮತ್ತು ಅದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯನ ಪತ್ನಿ ಪಾರ್ವತಿಗೆ ವಿಜಯನಗರದಲ್ಲಿ 50:50 ಅನುಪಾತದಲ್ಲಿ 14 ಸೈಟ್​ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಪ್ರಸ್ತುತ ಲೋಕಾಯುಕ್ತ ಮತ್ತು ಇಡಿ ಇದೆ ವಿಷಯದ ಕುರಿತು ತನಿಖೆ ನಡೆಸುತ್ತಿದ್ದು. ಇದೀಗ ಪ್ರಕರಣದ ಎ4 ಆರೋಪಿ ದೇವರಾಜು ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್​ಗೆ ಅರ್ಜಿಸಲ್ಲಿಸಿದ್ದು.2004ರಲ್ಲಿ ನಡೆದಿರುವ ಜಮೀನು ಮಾರಾಟದ ಬಗ್ಗೆ ಈಗ ತನಿಖೆ ನಡೆಸುತ್ತಿದ್ದಾರೆ. ನನ್ನ ತಪ್ಪಿಲ್ಲದಿದ್ದರು ನಾನು ತನಿಖೆ ಎದುರಿದುತ್ತಿದ್ದೇನೆ. ಆದ್ದರಿಂದ ನನ್ನ ವಿರುದ್ದದ ಈ ಪ್ರಕರಣವನ್ನು ಕೈಬಿಡುವಂತೆ ಕೋರಿ ದೇವರಾಜು ಪರ ವಕೀಲರು ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

RELATED ARTICLES

Related Articles

TRENDING ARTICLES