ರಾಜ್ಯದ ಪ್ರತಿ ಮೂಲೆಯಿಂದಲೂ ಬಿಪಿಎಲ್ ಕಾರ್ಡಗಳು ರದ್ದಾಗುತ್ತಿವೆ ಎಂದು ಮಾಹಿತಿ ಬರುತ್ತಿದ್ದು. ಬಿಪಿಎಲ್ ಕಾರ್ಡ್ ರದ್ದಾದ ಹಿನ್ನಲೆ ಸಾರ್ವಜನಿಕರು ಸರ್ಕಾರದ ತೆಗೆದುಕೊಂಡಿರುವ ಕ್ರಮದ ಬಗ್ಗೆ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಬಿಪಿಎಲ್(BPL) ಕಾರ್ಡ್ಗಳನ್ನು ರದ್ದುಪಡಿಸುವ ಸಾಹಸಕ್ಕೆ ರಾಜ್ಯ ಸರ್ಕಾರ ಕೈಹಾಕಿದ್ದು. ಉಳ್ಳವರ ಕಾರ್ಡ್ಗಳ ಜೊತೆಗೆ ಬಡವರ ಕಾರ್ಡ್ಗಳು ಕೂಡ ರದ್ದಾಗುತ್ತಿವೆ ಎಂದು ಮಾಹಿತಿ ದೊರೆತಿದೆ. ಬಿಪಿಎಲ್ ಕಾರ್ಡ್ಗಳನ್ನು ಕಳೆದುಕೊಂಡ ಜನರು ಕಣ್ಣೀರಿಡುತ್ತದ್ದು. ಕೇವಲ ರೇಷನ್ಗಲ್ಲದೆ ಉಳಿದ ಕೆಲಸಕ್ಕೆ ರೇಷನ್ ಕಾರ್ಡ್ ಅವಶ್ಯಕತೆ ಇದ್ದು. ಇದೀಗ ಒಮ್ಮೆಲೆ ಸರ್ಕಾರ ಇಂತಹ ನಿರ್ಧಾರ ಕೈಹಾಕಿರುವುದು ಮದ್ಯಮ ವರ್ಗ ಮತ್ತು ಬಡ ಜನರಿಗೆ ಶಾಕ್ ನೀಡಿದಂತಾಗಿದೆ.
ರಾಜ್ಯದಲ್ಲಿ ಸುಮಾರು 22 ಲಕ್ಷ ಬಿಪಿಎಲ್ ಕಾರ್ಡ್ಗಳು ರದ್ದಾಗಲಿದೆ ಎಂದು ಮಾಹಿತಿ ದೊರೆತಿದ್ದು. ಇದರ ಕುರಿತಂತೆ ರಾಜ್ಯ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ . ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಸೇರಿದಂತೆ ಉಳಿದ ಕಾಂಗ್ರೆಸ್ ನಾಯಕರು ಕೇವಲ ಅನರ್ಹರ ಬಿಪಿಎಲ್ ಕಾರ್ಡ್ಗಳು ಮಾತ್ರ ರದ್ದಾಗುತ್ತಿವೆ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ.
ಪವರ್ ಟಿವಿ ನಡೆಸಿದ ಕಾರ್ಯಕ್ರಮದಲ್ಲಿ BPL ಕಾರ್ಡ್ ಕಳೆದುಕೊಂಡವರ ಮಾತು
ಪವರ್ ಟಿವಿ ನಡೆಸಿದ ಪೋನ್ ಇನ್ ಕಾರ್ಯಕ್ರಮಕ್ಕೆ ಬಿಪಿಎಲ್ ಕಾರ್ಡ್ ಕಳೆದಕೊಂಡವರು ಕರೆ ಮಾಡಿ ತಮ್ಮ ಸಮಸ್ಯೆಯನ್ನು ಹಂಚಿಕೊಂಡಿದ್ದು. ರಾಜ್ಯ ಸರ್ಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತ ಪಡಿಸಿದರು. ಸುಮಾರು 30 ನಿಮಿಷ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗದಿಂದ ನೂರಾರು ಜನರು ಪವರ್ ಟಿವಿಗೆ ಕರೆ ಮಾಡಿದ್ದು ಆಯ್ದ ಕೆಲವು ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಬಾರಿ ಅಕ್ಕಿ ತರಲು ಹೋಗಿದ್ದಾಗ ಬಿಪಿಎಲ್ ಕಾರ್ಡ್ ರದ್ದಾದ ವಿಷಯ ತಿಳಿಯಿತು ಎಂದು ಕರೆ ಮಾಡಿದ ಸಾರ್ವಜನಿಕರು ತಮ್ಮ ಅಳಲನ್ನು ತೋಡಿಕೊಂಡಿದ್ದು. ಬಿಪಿಎಲ್ ಕಾರ್ಡ್ ರದ್ದಾಗಿರುವುದರಿಂದ ತುಂಬಾ ಸಮಸ್ಯೆಯಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.