Monday, January 27, 2025

ಪಾಕಿಸ್ತಾನದಲ್ಲಿ ಅಂಧರ ಟಿ20 ವಿಶ್ವಕಪ್: ಭಾರತ ತಂಡಕ್ಕೆ ಸಿಗದ ಅನುಮತಿ

ದೆಹಲಿ: ಪಾಕಿಸ್ತಾನದಲ್ಲಿ ನಡೆಯಲಿರುವ ಅಂಧರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಆಡುವುದಿಲ್ಲ ಎಂದು ಮಾಹಿತಿ ದೊರೆತಿದ್ದು. ಭಾರತದ ಕೇಂದ್ರ ಸರ್ಕಾರವು ಪಾಕಿಸ್ತಾನಕ್ಕೆ ಪ್ರಯಾಣಿಸಲು ಅನುಮತಿ ನೀಡದ ಕಾರಣ ತಂಡವು ಟೂರ್ನಿಯಿಂದ ಹಿಂದೆ ಸರಿದಿದೆ ಎಂದು ರಾಷ್ಟ್ರೀಯ ಅಂಧರ ಕ್ರಿಕೆಟ್ ಫೆಡರೇಷನ್‌ ತಿಳಿಸಿದೆ.

ಇದೇ 23ರಿಂದ ಡಿಸೆಂಬರ್ 3ರವರೆಗೆ ಟೂರ್ನಿಯು ಪಾಕ್‌ನಲ್ಲಿ ನಡೆಯಲಿದೆ. ಅದರಲ್ಲಿ ಭಾಗವಹಿಸಲು ಭಾರತ ತಂಡವು ವಾಘಾ ಗಡಿ ಮೂಲಕ ಪಾಕಿಸ್ತಾನಕ್ಕೆ ತೆರಳಬೇಕಿತ್ತು. ಅಂಧರ ಕ್ರಿಕಟ್ ತಂಡಕ್ಕೆ ಈಚೆಗೆ ಕೇಂದ್ರ ಕ್ರೀಡಾ ಸಚಿವಾಲಯವು ನಿರಾಕ್ಷೇಪಣಾ ಪತ್ರ (ಎನ್‌ಸಿ) ನೀಡಿತ್ತು. ಆದರೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಅನುಮತಿ ದೊರೆಯಲಿಲ.

ನಾವು ನಾಳೆ (ಬುಧವಾರ) ವಾಘಾ ಗಡಿಗೆ ಹೋಗಲು ಸಿದ್ಧರಾಗಿದ್ದೆವು. ಆದರೆ ಇದುವರೆಗೆ ವಿದೇಶಾಂಗ ವ್ಯವಹಾರಗಳ ಇಲಾಖೆಯ ಅಧಿಕಾರಿಗಳಿಂದ ಯಾವುದೇ ಅನುಮತಿ ಬಂದಿಲ್ಲ. ಇದರಿಂದ ನಮಗೆ ಬೇಸರವಾಗಿದೆ’ ಎಂದು ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆ (ಐಬಿಸಿಎ) ಪ್ರಧಾನ ಕಾರ್ಯದರ್ಶಿ ಶೈಲೆಂದ್ರ ಯಾದವ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES