ಬೆಂಗಳೂರು : ನಗರದಲ್ಲಿ ಅಂತರ್ರಾಷ್ಟ್ರೀಯ ಮಟ್ಟದ ಟೆಕ್ ಶೃಂಗ ಸಭೆಯನ್ನು ಆಯೋಜನೆ ಮಾಡಿದ್ದು. ಇಂದು ಸಿಎಂ ಸಿದ್ದರಾಮಯ್ಯನವರು ಶೃಂಗ ಸಭೆಗೆ ಚಾಲನೆ ನೀಡಿದರು. ಈ ಸಭೆಯಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಬೆಂಗಳೂರನ್ನು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ದಿ ಮಾಡಲು ನಾವು ಸಿದ್ದರಾಗಿದ್ದೇವೆ. ಅದಕ್ಕೆ ನಿಮ್ಮೆಲ್ಲರ ಸಹಕಾರದ ಅವಶ್ಯಕತೆ ಇದೆ ಎಂದು ಹೇಳಿದರು.
ಬೆಂಗಳೂರು ಟೆಕ್ ಸಮ್ಮಿಟ್ ಮಾತನಾಡಿದ ಡಿಸಿಎಂ ‘ಬೆಂಗಳೂರು ಕೇವಲ ಸರ್ಕಾರದಿಂದ ಬೆಳೆದಿಲ್ಲ,
ನಿಮ್ಮೆಲ್ಲರ ಸಹಕಾರದಿಂದ ಅಭಿವೃದ್ಧಿಯಾಗಿದೆ, ಹೊರಗಡೆ ಬರುವ ಕಂಪನಿಗಳಿಗೆ ನಾವು ಪ್ರೀತಿಯಿಂದ ಸ್ವಾಗತಿಸುತ್ತೇವೆ. ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಡಿಸಿಎಂ ‘ಬೆಂಗಳೂರು ಹಲವು ರಂಗಗಳಲ್ಲಿ ನಂಬರ್ ಒನ್ ಪ್ಲೇಸ್ ನಲ್ಲಿದೆ
ಇದರ ಮಧ್ಯೆ ನಗರದಲ್ಲಿ ಹಲವು ಸಮಸ್ಯೆಗಳಿವೆ, ಟ್ರಾಫಿಕ್ ಸೇರಿ ಹಲವು ಸಮಸ್ಯೆಗಳನ್ನು ನಾವೆಲ್ಲ ಸೇರಿ ಬಗೆಹರಿಸೋಣ ಎಂದು ಕರೆನೀಡದರು. ಬೆಂಗಳೂರನ್ನು ವಲ್ಡ್ ಕ್ಲಾಸ್ ರೀತಿ ಅಭಿವೃದ್ದಿ ಮಾಡಲು ನಾವು ರೆಡಿ ಇದ್ದೇವೆ. ನಿಮಗೆ ಬೇಕಾದ ಸೌಲಭ್ಯ ನೀಡಲು ಸರ್ಕಾರ ರೆಡಿ ಇದೆ. ಕರ್ನಾಟಕ ಗ್ಲೋಬಲ್ ಲೀಡರ್ ಆಗಿ ಬೆಳೆದಿದೆ
ಐಟಿ-ಬಿಟಿ ಸೇರಿದಂತೆ ಚಿತ್ರರಂಗದಲ್ಲಿಯೂ ನಾವು ಮುಂದೆ ಇದ್ದೇವೆ. ಸ್ಟಾರ್ಟ್ ಆಪ್ ಕಂಪನಿ ಆರಂಭಿಸಲು ಬೆಂಗಳೂರು ಉತ್ತಮ ಸ್ಥಳವಾಗಿದೆ ಇದಕ್ಕಾಗಿ ಸರ್ಕಾರ ಸಕಲ ಸೌಲಭ್ಯ ನೀಡಲು ಸಿದ್ಧವಿದೆ ಎಂದು ಹೇಳಿದರು.