Sunday, February 23, 2025

ಹರಿಯುವ ಕಾಲುವೆಗೆ ಇಳಿದ ಟೆಂಪೋ : ತಪ್ಪಿದ ಭಾರೀ ದುರಂತ

ರಾಯಚೂರು: ಕೃಷಿ ಕೂಲಿ ಕಾರ್ಮಿಕರನ್ನ ಹೊತ್ತೊಯ್ಯುತ್ತಿದ್ದ ಗೂಡ್ಸ್ ಆಟೋ ಚಾಲಕನ ನಿಯಂತ್ರಣ ತಪ್ಪಿ ತುಂಬಿ ಹರಿಯುತ್ತಿದ್ದ ಕಾಲುವೆಗೆ ಇಳಿದ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಮಸರಕಲ್ ಬಳಿಯಿರುವ ಎನ್‌ಆರ್‌ಬಿಸಿ ಕಾಲುವೆಯಲ್ಲಿ ಈ ಘಟನೆ ನಡೆದಿದೆ. ಕಾಲುವೆ ದಡದ ಸರ್ವೀಸ್ ರಸ್ತೆಯಲ್ಲಿ ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಗೂಡ್ಸ್ ಆಟೋ ಬಿದ್ದಿದೆ. ಕಾಲುವೆಗೆ ಬಿದ್ದ ಬಳಿಕ ಚಾಲಕ ಸೇರಿ ಹತ್ತು ಜನ ಪ್ರಯಾಣಿಕರು ಪರದಾಟ ನಡೆಸಿದ್ದಾರೆ.

ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಭಾರಿ ಅನಾಹುತ ತಪ್ಪಿದೆ. ಈ ವೇಳೆ ಸ್ಥಳೀಯರು ಕೂಡಲೇ ಆಟೋದಲ್ಲಿ ಪ್ರಯಾಣಿಸುತ್ತಿದ್ದವರ ರಕ್ಷಣೆಗೆ ಬಂದಿದ್ದು, ಜಮೀನುಗಳಲ್ಲಿದ್ದ ಹಗ್ಗಗಳ ಮೂಲಕ ಎಲ್ಲರನ್ನ ರಕ್ಷಿಸಿದ್ದಾರೆ. ಗಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಗೂಡ್ಸ್ ವಾಹನಗಳಲ್ಲಿ ಪ್ರಯಾಣಿಕರನ್ನ ಕರೆದೊಯ್ಯುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ

RELATED ARTICLES

Related Articles

TRENDING ARTICLES