Monday, December 23, 2024

ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸುಮೊಟೋ ಕೇಸ್ ಹಾಕಬೇಕು: ಕೆ.ಎಸ್​​ ಈಶ್ವರಪ್ಪ

ಬೆಂಗಳೂರು: ಆರ್.ಎಸ್.ಎಸ್. ಹಾಗೂ ಬಿಜೆಪಿ ವಿಷಕಾರಿ ಹಾವು ಇದ್ದಂತೆ. ಆರ್.ಎಸ್.ಎಸ್. ಸ್ವಯಂ ಸೇವಕರನ್ನು ಕೊಲ್ಲಿ ಎಂಬ ಹೇಳಿಕೆ ನೀಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸುಮೊಟೋ ಕೇಸ್ ಹಾಕಬೇಕು ಮತ್ತು ಖರ್ಗೆಯವರು ದೇಶದ ಜನರ ಕ್ಷಮೆ ಕೇಳಬೇಕು ಎಂದು ರಾಷ್ಟ್ರ ಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದ್ದಾರೆ.

ಆರ್.ಎಸ್.ಎಸ್. ಎಂದರೆ ಒಂದು ವ್ಯಕ್ತಿತ್ವ ನಿರ್ಮಾಣದ ಸಂಸ್ಥೆಯಾಗಿದೆ. ಹಿಂದುತ್ವದ ಮತ್ತು ರಾಷ್ಟ್ರೀಯತೆ ಬಗ್ಗೆ ಜಾಗೃತಿ ಮೂಡಿಸುತ್ತಾ ಬರುತ್ತಿದೆ. ಇಡೀ ದೇಶದ ಜನರು ಅದನ್ನು ಒಪ್ಪಿದ್ದಾರೆ. ಆದರೆ ಖರ್ಗೆಯವರಂತಹ ಹಿರಿಯರು ಹೀಗೆ ಮಾತನಾಡಬಾರದಿತ್ತು. ಅವರು ದೇಶದ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.

ಅಧಿಕಾರದ ದಾಹ ಮತ್ತು ಮುಸಲ್ಮಾನರನ್ನು ಸಂತೃಪ್ತಿಗೊಳಿಸುವ ದೃಷ್ಟಿಯಿಂದ ಇವರು ಈ ಹೇಳಿಕೆ ನೀಡಿದ್ದಾರೆ. ಇಂದಿರಾಗಾಂಧಿ ಮತ್ತು ನೆಹರೂ ಅವರೂ ಕೂಡ ಆರ್.ಎಸ್.ಎಸ್. ನಿಷೇಧಿಸಲು ಹೊರಟಿದ್ದರು. ಆದರೆ ಆಗಲಿಲ್ಲ. ಆಗವುದೂ ಇಲ್ಲ. ಖರ್ಗೆಯವರು ಉದ್ವೇಗದಲ್ಲಿ ಹೇಳಿದ್ದರೆ ಆ ಮಾತು ಬೇರೆ. ಆದರೆ ಉದ್ದೇಶಪೂರ್ವಕವಾಗಿ ಹೇಳಿದ್ದಾರೆ. ಹಾಗಾಗಿ ನನ್ನ ವಿರುದ್ದ ಸುಮೊಟೊ ಕೇಸ್ ದಾಖಲಿಸಿದಂತೆ ಅವರ ಮೇಲೂ ಕೂಡ ಕೇಸ್ ದಾಖಲಿಸಬೇಕು ಎಂದು ಈಶ್ವರಪ್ಪ ಆಗ್ರಹಿಸಿದ್ದಾರೆ.

 

RELATED ARTICLES

Related Articles

TRENDING ARTICLES