Sunday, December 22, 2024

ANF ಕಾರ್ಯಚರಣೆಯಲ್ಲಿ ನಕ್ಸಲ್ ಮುಖಂಡ ವಿಕ್ರಂಗೌಡ ಹತ್ಯೆ

ಉಡುಪಿ (ನ.19): ಎಎನ್‌ಎಫ್(Anti-Naxal Force) ತಂಡ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೆಬ್ರಿ ಕಬ್ಬಿನಾಲೆಯ ಸೀತಂಬೈಲು ಎಂಬಲ್ಲಿ ನಕ್ಸಲರ ವಿರುದ್ಡ ನಡೆದ ಭೀಕರ ಗುಂಡಿನ ಕಾಳಗದಲ್ಲಿ ನಕ್ಸಲ್ ಮುಖಂಡ ವಿಕ್ರಂಗೌಡ ಹತ್ಯೆ ಮಾಡಲಾಗಿದೆ

ಕೊಪ್ಪ ತಾಲೂಕಿನ ಯಡಗುಂದ ಗ್ರಾಮಕ್ಕೆ ನಕ್ಸಲರು ಭೇಟಿ ನೀಡಿದ್ದ ಬಗ್ಗೆ ಮಾಹಿತಿ ಕಲೆಹಾಕಿದ್ದ ಎಎನ್​ಎಫ್ ತಂಡ. ಸೋಮವಾರ ರಾತ್ರಿವೇಳೆ 5 ಮಂದಿ ನಕ್ಸಲರ ತಂಡ ಸೀತಂಬೈಲು ಸಮೀಪ ರೇಷನ್ ಸಂಗ್ರಹಿಸಲು ಬಂದಿದ್ದಾರೆ. ಈ ವೇಳೆ ಎಎನ್​ಎಫ್ ತಂಡ ಕಾರ್ಯಾಚರಣೆ ನಡೆಸಿದೆ. ಅದಕ್ಕೆ ಪ್ರತಿಯಾಗಿ ನಕ್ಸಲರು ಗುಂಡಿನ ದಾಳಿ ನಡೆಸಿದ್ದಾರೆ. ಭೀಕರ ಗುಂಡಿನ ಕಾಳಗದಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡ ಹತನಾಗಿದ್ದಾನೆ. ಇನ್ನುಳಿದ ನಾಲ್ಕೈದು ನಕ್ಸಲರು ಸ್ಥಳದಿಂದ ಪರಾರಿಯಾಗಿದ್ದು, ಶೋಧಕಾರ್ಯ ಮುಂದುವರಿದೆ.

ಕಳೆದ ಒಂದೂವರೆ ದಶಕದಿಂದ ಮಲೆನಾಡಿಗರ ಬದುಕಿಗೆ ಸಂಚಕಾರ ಬಂದಾಗಲೆಲ್ಲಾ ಸರ್ಕಾರದ ಧೋರಣೆಗಳ ಬಗ್ಗೆ ಅಲ್ಲಲ್ಲೇ ನಕ್ಸಲ್ ಬ್ಯಾನರ್, ಕರಪತ್ರ, ಲೆಟರ್ಗಳು ಹೊರಬರ್ತಿದ್ವು. ಆದರೆ ಇತ್ತೀಚೆಗೆ ನಕ್ಸಲರೇ ಹಳ್ಳಿಗಳಿಗೆ ಭೇಟಿ ಕೊಡುತ್ತಿದ್ದಾರೆ ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚೆ ನಡೆಸಿದ್ದರು. ಆದರೀಗ ಕಾರ್ಕಳದಲ್ಲೂ ಅದೇ ರೀತಿ ಚರ್ಚೆಗಳನ್ನು ನಡೆಸಿರುವುದು ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ಹೆಚ್ಚುತ್ತಿರುವುದರ ಸೂಚನೆಯಾಗಿದೆ. ಇತ್ತ ಪೊಲೀಸರು ಎ.ಎನ್.ಎಫ್. ಸಿಬ್ಬಂದಿ ಅಲರ್ಟ್‌ ಆಗಿ ಕಾರ್ಯಾಚರಣೆಗೆ ಮುಂದಾಗಿದ್ದಾರೆ.

ಗೃಹ ಸಚಿವ ಪರಮೇಶ್ವರ್​ ಹೇಳಿಕೆ 

ನಕ್ಸಲ್ ವಿಕ್ರಮ್ ಗೌಡ ಎನ್‌ಕೌಂಟರ್ ವಿಚಾರವಾಗಿ ಮಾತನಾಡಿದ ಗೃಹ ಸಚಿವ ಪರಮೇಶ್ವರ್ ‘ ವಿಕ್ರಮ್ ಗೌಡ ಅನ್ನೋ ಗ್ರೇಡೆಡ್ ನಕ್ಸಲ್‌ನನ್ನ ಎನ್‌ಕೌಂಟರ್ ಮಾಡಿದ್ದಾರೆ. ಕಳೆದ 20 ವರ್ಷಗಳಿಂದ ಅವರನ್ನು ಪೊಲೀಸರು ಹುಡುಕ್ತಿದ್ರು, ತಪ್ಪಿಸಿಕೊಂಡು ಓಡಾಡ್ತಿದ್ರು. ಅನೇಕ ಎನ್‌ಕೌಂಟರಗಳಲ್ಲಿ ವಿಕ್ರಮ್ ಗೌಡ ತಪ್ಪಿಸಿಕೊಂಡಿದ್ರು
ನಿನ್ನೆ ಸಂಜೆ ವಿಕ್ರಮ್ ಗೌಡ ಎನ್‌ಕೌಂಟರ್ ಆಗಿದೆ. ನಿನ್ನೆ ಪೊಲೀಸರ ಮೇಲೆ ಅವರು ಫೈಯರ್ ಮಾಡಿದ್ರು
ಪೊಲೀಸರು ರಿಟರ್ನ್ ಆಗಿ ಫೈರ್ ಮಾಡಿ ಎನ್‌ಕೌಂಟರ್ ಮಾಡಿದ್ದಾರೆ. ಅವರ ಜತೆಯಲ್ಲಿದ್ದ ಇಬ್ಬರು ಮೂವರು ಓಡಿ ಹೋಗಿದ್ದಾರೆ ಆ ಭಾಗದಲ್ಲಿ ಕೂಂಬಿಂಗ್ ಮುಂದುವರೆದಿದೆ ವಿಕ್ರಮ್ ಗೌಡ ಸಕ್ರಿಯರಾಗಿದ್ರು ಅಂತನೇ ಹುಡುಕ್ತಿದ್ರು’ ಎಂದು ಹೇಳಿದರು.

 

RELATED ARTICLES

Related Articles

TRENDING ARTICLES