Friday, January 24, 2025

ಕಾಲುಜಾರಿ ಕೆರೆಗೆ ಬಿದ್ದು ತಂದೆ ಮಗಳು ಸಾ*ವು

ತುಮಕೂರು : ತುಂಬಾಡಿ ಹೊಸಕೆರೆ ನೋಡಲು ಹೋಗಿದ್ದ ಬೆಂಗಳೂರು ಮೂಲದ ಕುಟುಂಬದ ತಂದೆ ಮಗಳು ಕಾಲು ಜಾರಿ ಬಿದ್ದು ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಸೋಮವಾರ ಸಂಜೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ತುಂಬಾಡಿಯಲ್ಲಿ ನಡೆದಿದೆ.

ಇನ್ನೂ ಬೆಂಗಳೂರಿನ ಶಿವಾಜಿನಗರ ನಿವಾಸಿಗಳಾದ ಫೀರ್ದೋಸ್ (35) ವರ್ಷ ಮಗಳು ಅಹೀಮಾ (6) ವರ್ಷದ ಬಾಲಕಿ ಮೃತಪಟ್ಟ ದುರ್ದೈವಿಗಳಾಗಿದ್ದು ಕೊರಟಗೆರೆ ಪಟ್ಟಣದ ಗಿರಿನಗರದಲ್ಲಿರುವ ಸಂಬಧಿಕರ ಮನೆಗೆ ಬಂದಿದ್ದರು ಎನ್ನಲಾಗಿದೆ‌, ಈ ವೇಳೆ ತುಂಬಾಡಿ ಹೊಸಕೆರೆ ಕೋಡಿ ಬಿದ್ದಿರುವುದನ್ನ ನೋಡಲು ಕುಟುಂಬದವರೆಲ್ಲಾ ತೆರಳಿದ್ದರು ಎನ್ನಲಾಗಿದ್ದು.

ಈ ವೇಳೆ ಕೋಡಿ ಬಿದ್ದ ನೀರಿನಲ್ಲಿ ಮಗಳು ಕಾಲು ಜಾರಿ ಬಿದಿದ್ದು ಮಗಳನ್ನ ಉಳಿಸಲು ಹೋಗಿ ತಂದೆಯೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಆಗಮಿಸಿದ ಆಗ್ನಿಶಾಮಕ ಅಧಿಕಾರಿಗಳು ಇಬ್ಬರ ಶವವನ್ನ ಹೊರ ತೆಗೆದಿದ್ದು ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

RELATED ARTICLES

Related Articles

TRENDING ARTICLES