Wednesday, January 22, 2025

ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷನ ಮನೆಯಲ್ಲಿ ಜಿಂಕೆ ಮಾಂಸ ಪತ್ತೆ

ಶಿವಮೊಗ್ಗ: ಸಾಗರದಲ್ಲಿ ಅರಣ್ಯಾಧಿಕಾರಿಗಳು ಭರ್ಜರಿ ದಾಳಿ ನಡೆಸಿದ್ದಾರೆ. ಸಾಗರ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಜಯರಾಂ ಸೂರನಗದ್ದೆ ನಿವಾಸದಲ್ಲಿ ಜಿಂಕೆ ಮಾಂಸವನ್ನು ಜಪ್ತಿ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆಯ ಜಯರಾಂ ಅವರ ಸೂರನಗದ್ದೆಯ ಬೀರೇಶ್ವರ ದೇವಸ್ಥಾನದ ಬಳಿಯ ನಿವಾಸದಲ್ಲಿ ಜಿಂಕೆಯನ್ನು ಹತ್ಯೆ ಮಾಡಿ, ಮಾಂಸದೂಟ ಮಾಡುತ್ತಿದ್ದ ಖಚಿತ ಮಾಹಿತಿ ವಲಯ ಅರಣ್ಯಾಧಿಕಾರಿ ಅಣ್ಣಪ್ಪ ಅವರಿಗೆ ತಿಳಿದು ಬಂದಿತ್ತು.

DFO ನಿರ್ದೇಶನದ ಮೇರೆಗೆ ಸೂರನಗದ್ದೆಯಲ್ಲಿನ ಜಯರಾಂ ನಿವಾಸದ ಮೇಲೆ ಕಳೆದ ತಡರಾತ್ರಿ 1 ಗಂಟೆಯ ಹಾಗೆ ದಾಳಿ ನಡೆಸಿದ್ದಾರೆ. ಈ ದಾಳಿ ವೇಳೆಯಲ್ಲಿ ಜಯರಾಂ ಸೂರನಗದ್ದೆ ಅವರ ಮನೆಯಲ್ಲಿ ಒಂದರಿಂದ ಎರಡು ಕೆಜಿಯಷ್ಟು ಜಿಂಕೆ ಮಾಂಸ ಪತ್ತೆಯಾಗಿದೆ ಎನ್ನಲಾಗುತ್ತಿದೆ. ಜಿಂಕೆಯನ್ನು ಹತ್ಯೆ ಮಾಡಿ, ಮಾಂಸವನ್ನು ಹಂಚಿಕೊಳ್ಳಲಾಗಿತ್ತು ಎನ್ನಲಾಗುತ್ತಿದೆ.

ಪತ್ತೆಯಾದ ಜಿಂಕೆ ಮಾಂಸ ಜಪ್ತಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ದಾಳಿಯ ಸಂದರ್ಭದಲ್ಲಿ ಜಯರಾಂ ಸೂರನಗದ್ದೆ ಅವರು ಸ್ಥಳದಿಂದ ಪರಾರಿಯಾಗಿದ್ದಾರೆ. ಅವರನ್ನು ಪತ್ತೆ ಹಚ್ಚಿ ಬಂಧಿಸೋ ಕಾರ್ಯದಲ್ಲಿ ಅರಣ್ಯಾಧಿಕಾರಿಗಳು ತೊಡಗಿದ್ದಾರೆ.

RELATED ARTICLES

Related Articles

TRENDING ARTICLES