Sunday, December 22, 2024

‘ನಾನೇನು ಡ್ಯಾನ್ಸ್ ಮಾಡ್ತಾ ಇದ್ದೀನಾ: ಮಾದ್ಯಮದವರ ಮೇಲೆ ಸಿಟ್ಟಾದ ಮೂಡಾ ಹಿಂದಿನ ಆಯುಕ್ತ ನಟೇಶ್​​

ಮೈಸೂರು : ಮೂಡಾ ಹಗರಣದ ವಿಚಾರಣೆಗಾಗಿ ಮುಡಾದ ಹಿಂದಿನ ಆಯುಕ್ತ ನಟೇಶ್​ ವಿಚಾರಣೆಗಾಗಿ ಲೋಕಾಯುಕ್ತ ಕಛೇರಿಗೆ ಆಗಮಿಸಿದ್ದು. ಕಛೇರಿಗೆ ಆಗಮಿಸುತ್ತಿದ್ದಂತೆ ಸ್ಥಳದಲ್ಲಿದ್ದ ಮಾಧ್ಯಮದವರ ಮೇಲೆ ಗರಂ ಆಗಿದ್ದಾರೆ.

ಮೂಡಾ ಹಗರಣದ ಕುರಿತಂತೆ ಲೋಕಾಯುಕ್ತದಿಂದ ನಡೆಯುತ್ತಿರುವ ತನಿಖೆ ಚುರುಕಾಗಿದ್ದು. ಸಿಎಂ ಪತ್ನಿಗೆ 14 ಸೈಟ್​​ ಮಂಜೂರು ಮಾಡಿದ್ದ ಮುಡಾದ ಹಿಂದಿನ ಆಯುಕ್ತನಾಗಿದ್ದ ನಟೇಶ್​ನನ್ನು ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತದಿಂದ ನೋಟಿಸ್​​ ಕೊಟ್ಟ ಹಿನ್ನಲೆ ಇಂದು ಮೈಸೂರಿನ ದಿವಾನ್ಸ್ ರಸ್ತೆಯ ಲೋಕಾಯುಕ್ತ ಕಚೇರಿಗೆ ನಟೇಶ್​​ ಆಗಮಿಸಿದರು.

ಲೋಕಾಯುಕ್ತ ಕಚೇರಿಗೆ ಆಗಮಿಸುತ್ತಿದ್ದಂತೆ ಮಾಧ್ಯಮದ ಕ್ಯಾಮರಾ ಕಂಡು ಗರಂ ಆದ ನಟೇಶ್‌
‘ನನ್ನೇಕೆ ವಿಡಿಯೋ ಮಾಡ್ತೀದ್ದೀರಾ, ನಾನೇನು ಡ್ಯಾನ್ಸ್ ಮಾಡ್ತಾ ಇದ್ದೀನಾ ಅಂತಾ ಇಂಗ್ಲೀಷ್​ನಲ್ಲಿ ಮಾತನಾಡುತ್ತಾ ಗರಂ ಆದರು ಮತ್ತು ಕೈಯಲ್ಲಿ ತಂದಿದ್ದ ದಾಖಲೆಗಳನ್ನ ಟೇಬಲ್ ಮೇಲೆ ಕುಕ್ಕಿ ಮಾದ್ಯಮದವರ ಮೇಲೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES