Thursday, December 26, 2024

ನಟ ತಾಂಡವ್​​ರಾಮ್​ನಿಂದ ನಿರ್ದೇಶಕನ ಕೊ*ಲೆ ಯತ್ನ

ಬೆಂಗಳೂರು : ಸಿನಿಮಾ ಅರ್ಧಕ್ಕೆ ನಿಂತಿದ್ದಕ್ಕೆ ನಿರ್ದೇಶನ ಮೇಲೆ ಫೈರ್ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು. ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಜೋಡಿಹಕ್ಕಿ’ ಧಾರವಾಹಿಯ ನಾಯಕ ತಾಂಡವ್​ರಾಮ್​​ ಕೊಲೆ ಮಾಡಲು ಯತ್ನಿಸಿದ್ದಾರೆ. ಮುಗಲ್​​ಪೇಟೆ ಸಿನಿಮಾದ ನಿದೇರ್ಶಕ ಭರತ್​ ಮೇಲೆ ಫೈರಿಂಗ್​​ ಆಗಿದೆ ಎಂದು ಮಾಹಿತಿ ದೊರೆತಿದೆ.

ನಿನ್ನೆ(ನ.18) ಸಿನಿಮಾ ವಿಚಾರವಾಗಿ ಚಂದ್ರಾಲೇಔಟ್ ಬಳಿಯ ಆಫೀಸ್​ನಲ್ಲಿ ಮಾತುಕತೆ ನಟ ಮತ್ತು ನಿರ್ದೇಶಕನ ನಡುವೆ ಮಾತುಕತೆ ನಡೆದಿದ್ದು.ಈ ವೇಳೆ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಜಗಳ ನಡೆದಿದೆ ಈ ವೇಳೆ ನಟ ತಾಂಡವರಾಮ್ ಭರತ್ ಮೇಲೆ ಫೈರಿಂಗ್ ಮಾಡಿದ್ದಾನೆ ಎಂದು ಮಾಹಿತಿ ದೊರೆತಿದೆ. ಅದೃಷ್ಟವಶಾತ್​ ಗನ್​ನಿಂದ ಹೊರೆಟ ಬುಲೇಟ್ ಡೈರೆಕ್ಟರ್​ಗೆ ತಗುಲದೆ ಗೋಡೆಗೆ ಬಿದ್ದಿದೆ. ತಕ್ಷಣ ಎಚ್ಚೆತ್ತಾ ನಿರ್ದೇಶಕ ಭರತ್​ ಚಂದ್ರಲೇಔಟ್​ ಪೋಲಿಸ್​ ಠಾಣೆಗೆ ದೂರು ನೀಡಿದ್ದು. ಪೋಲಿಸರು ನಟನನ್ನು ಬಂಧಿಸಿದ್ದಾರೆ.

ಸಿನಿಮಾ ಅರ್ಧಕ್ಕೆ ನಿಂತಿದ್ದಕ್ಕೆ ಸಿನಿಮಾ ನಿರ್ದೇಶಕನ ಮೇಲೆ ಫೈರಿಂಗ್ ನಡೆಸಿದ್ದು. ಯುವ ನಾಯಕ ತಾಂಡವ ರಾಮ್ ‘ಒಂದು ಕತೆ ಹೇಳಲ’, ‘ಜೋಡಿಹಕ್ಕಿ’, ‘ಭೂಮಿಗೆ ಬಂದ ಭಗವಂತ’ ದಾರವಾಹಿಯಲ್ಲಿ ನಟಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES