Sunday, January 26, 2025

ಒಂದು ದಿನ ದೆಹಲಿಯಲ್ಲಿದ್ದರೆ ಮನುಷ್ಯನ ಆಯಸ್ಸೇ ಕಡಿಮೆಯಾಗುತ್ತೆ! ಶಾಕಿಂಗ್​​ ರಿಪೋರ್ಟ್​

ದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಎಂಬುದು ಮಿತಿಮೀರಿದ್ದು. ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದೆ. ವಾಯು ಗುಣಮಟ್ಟ 500 ರ ಗಡಿ ಮುಟ್ಟಿದ್ದು  ಕೇವಲ ಒಂದು ವಾರದ ಅಂತರದಲ್ಲಿ 500ರ ಗಡಿ ತಲುಪಿದ .

ವಾಯುಮಾಲಿನ್ಯ ಹೆಚ್ಚಾದ ಹಿನ್ನಲೆ ದೆಹಲಿಯ ಎಲ್ಲಾ ಕಾಲೇಜುಗಳಲ್ಲಿಯೂ ಭೌತಿಕ ತರಗತಿಗಳನ್ನು ರದ್ದು ಮಾಡಿದ್ದು. ಆನ್ ಲೈನ್ ತರಗತಿ ನಡೆಸಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ನವೆಂಬರ್ 23 ರವರೆಗೆ ಆನ್​ಲೈನ್ ತರಗತಿಗಳು ನಡೆಸಲು ಮಾರ್ಗ ಸೂಚಿ ಪ್ರಕಟ ಮಾಡಲಾಗಿದೆ.

ದೆಹಲಿ ಸರ್ಕಾರದ ಕಾಲೇಜುಗಳಲ್ಲಿ 10ರಿಂದ 12ರ ತರಗತಿಗಳು ಕೂಡ ಆನ್​ಲೈನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದು. ದೆಹಲಿ ಹೃದಯ ಭಾಗ ಸೇರಿದಂತೆ ಅಶೋಕ ವಿಹಾರ್, ಆನಂದ್ ವಿಹಾರ್, ಭವಾನ, ಜಹಾಂಗೀರ್ ಪುರಿ, ದ್ಯಾನ್ ಚಂದ್ ಸ್ಟೇಡಿಯಂ, ಮುನಿರ್ಕಾ, ಆರ್ ಕೆ ಪುರಂ, ಹಲವೆಡೆ ವಾಯು ಮಾಲಿನ್ಯ 500ರ ಗಡಿ ದಾಟಿದೆ.

ದೆಹಲಿಯಲ್ಲಿರುವವರ ಆಯಸ್ಸು ಕಡಿಮೆಯಾಗಯುತ್ತಿದೆಯಾ !

ದೆಹಲಿಯ ವಾಯುಮಾಲಿನ್ಯದ ಬಗ್ಗೆ ಖಾಸಗಿ ಸಂಸ್ಥೆಯೊಂದು ಅಧ್ಯಯನ  ನಡೆಸಿ ವರದಿ ನೀಡಿದ್ದು. ವರದಿಯಲ್ಲಿರುವ ಮಾಹಿತಿಯು ದೆಹಲಿಯಲ್ಲಿನ ಜನರಿಗೆ ಶಾಕ್​ ನೀಡಿದೆ.

ಸೇವಿಸುವ ಗಾಳಿಯು ವಿಷಕಾರಿ ಆಗಿದೆ ಎಂದು ಸಂಶೋದನೆಯಲ್ಲಿನ ವರದಿಯಲ್ಲಿ ಬಹಿರಂಗವಾಗಿದ್ದು.
ಒಂದು ದಿನ ದೆಹಲಿಯಲ್ಲಿ ವಾಸವಿದ್ದರೆ ವ್ಯಕ್ತಿಯ ಆಯಸ್ಸು ಕಡಿಮೆಯಾಗುತ್ತದೆ ಎಂಬ ಆಘಾತಕಾರಿ ವರದಿ ದೊರೆತಿದೆ. ಒಂದು ದಿನ ದೆಹಲಿಯಲ್ಲಿ ಸಮಯ ಕಳೆಯುವ ವ್ಯಕ್ತಿ ಕನಿಷ್ಟ ಪಕ್ಷ 49 ಸಿಗರೇಟ್​​ ಸೇದುವುದಕ್ಕೆ ಸಮ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ವ್ಯಕ್ತಿಯ ಶ್ವಾಸಕೋಶ ಸಮಸ್ಯೆಗೆ ಒಳಗಾಗುತ್ತಾನೆ ಎಂದು ವರದಿಯಲ್ಲಿ ಉಲ್ಲೇಖಿಸಿಲಾಗಿದೆ.

ಈ ವರದಿ ಕೇವಲ ದೆಹಲಿ ಮಾತ್ರವಲ್ಲ ಪಕ್ಕದ ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶದ ರಾಜ್ಯದ ಜನರಿಗೂ ಇದು ಅನ್ವಯಯವಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದು. ದೆಹಲಿಯ ಅಕ್ಕಪಕ್ಕದ ರಾಜ್ಯದ ಜನರು ಕೂಡ ವಾಯುಮಾಲಿನ್ಯದ ದುಷ್ಪರಿಣಾಮಕ್ಕೆ ಬಲಿಯಾಗುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

RELATED ARTICLES

Related Articles

TRENDING ARTICLES