Thursday, January 23, 2025

ಶಾಸಕರ ಖರೀದಿಗೆ 50 ಕೋಟಿ ಅಲ್ಲ 100 ಕೋಟಿ ಆಫರ್ ನೀಡಿದ್ದಾರೆ : ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್​

ಮಂಡ್ಯ : ಬಿಜೆಪಿಯವರಿಂದ ಕಾಂಗ್ರೆಸ್​ ಶಾಸಕರ ಖರೀದಿ ಆರೋಪದ ವಿಷಯವಾಗಿ ಮಾತನಾಡಿದ ಮಂಡ್ಯ ಕಾಂಗ್ರೆಸ್​ ಶಾಸಕ ಗಣಿಗ ರವಿಕುಮಾರ್​ ‘ಬಿಜೆಪಿಯವರು 50 ಕೋಟಿ ಅಲ್ಲ,100 ಕೋಟಿ ಆಫರ್​ ನೀಡಿದ್ದಾರೆ ಎಂದು ಹೊಸ ಬಾಂಬ್​ ಸಿಡಿಸಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಗಣಿಗ ರವಿಕುಮಾರ್​ ‘ ನಮ್ಮ ಮುಖ್ಯಮಂತ್ರಿಗಳು ಹೇಳಿರುವುದರಲ್ಲಿ ಸತ್ಯ ಇದೆ ವಿರೋಧ ಪಕ್ಷದವರು ನಮ್ಮ ಶಾಸಕರನ್ನು ಭೇಟಿಯಾಗಿದ್ದಾರೆ. ಶಾಸಕರನ್ನು ಎಲ್ಲಿ ಭೇಟಿಯಾಗಿದ್ದಾರೆ ? ಯಾವ ಗೆಸ್ಟ್ ಹೌಸ್ ಗೆ ಬಂದಿದ್ರು? ಯಾವ ಏರ್ಪೋರ್ಟ್ ನಲ್ಲಿ ಸಿಕ್ಕಿದ್ರು? ಯಾವ ಹೋಟೆಲ್ ನಲ್ಲಿ ಬಂದು ಭೇಟಿ ಮಾಡಿದ್ರು ಅನ್ನೋದರ ವಿಡಿಯೋ, ಆಡಿಯೋ ರೆಕಾರ್ಡ್ ಇದೆ ಸಮಯ ಬಂದಾಗ ಆ ಆಡಿಯೋ ಮತ್ತು ವಿಡಿಯೋಗಳನ್ನು ಬಿಡುಗಡೆ ಮಾಡುತ್ತೇವೆ’ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಶಾಸಕ ಗಣಿಗ ರವಿಕುಮಾರ್​ ‘ಬಿಜೆಪಿಯವರು ಭೇಟಿಯಾಗಿ 50ಕೋಟಿ ಆಫರ್​ ನೀಡಿರುವ ವಿಡಿಯೋಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ಸಮಯ ನೋಡಿ ಆ ವಿಡಿಯೋಗಳು ಮತ್ತು ಆಡಿಯೋಗಳನ್ನು ಹರಿಬಿಡುತ್ತೇವೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES