Monday, January 20, 2025

ಕಳೆದ ಬಾರಿ ಸರ್ಕಾರ ರಚಿಸಲು ಸಿದ್ದರಾಮಯ್ಯನವರೇ ಶಾಸಕರನ್ನು ಕಳುಹಿಸಿದ್ದರು : ಜೋಶಿ

ಹುಬ್ಬಳ್ಳಿ : ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹುಬ್ಬಳ್ಳೀಯಲ್ಲಿ ಹೊಸ ಬಾಂಬ್​ ಸಿಡಿಸಿದ್ದು. ಕಳೆದ ಬಾರಿ ಬಿಜೆಪಿ ಸರ್ಕಾರ ರಚಿಸಲು ಸಿದ್ದರಾಮಯ್ಯನವರೇ ಶಾಸಕರನ್ನು ಕಳುಹಿಸಿದ್ದರು ಎಂದು ಹೇಳಿಕೆ ನೀಡಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.

ಹುಬ್ಬಳಿಯಲ್ಲಿ ಮಾದ್ಯಮದೊಂದಿಗೆ ಮಾತನಾಡಿದ ಪ್ರಹ್ಲಾದ್​ ಜೋಶಿ ಕಳೆದ ಬಾರಿ ಸರ್ಕಾರ ಮಾಡಲು ಸಿದ್ದರಾಮಯ್ಯರಿಗೆ ನೈತಿಕತೆ ಇರಲಿಲ್ಲ. ಹೀಗಾಗಿ ಕೆಲ ಶಾಸಕರನ್ನು ಸಿದ್ದರಾಮಯ್ಯನವರೆ ಬಿಜೆಪಿಗೆ ಕಳುಹಿಸಿದ್ದರು, ಹೀಗಾಗಿ ನಾವು ಸರ್ಕಾರ ರಚನೆ ಮಾಡಬೇಕಾಗಿ ಬಂತು ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಪ್ರಹ್ಲಾದ್​ ಜೋಶಿ ಈ ಬಾರಿ ಕಾಂಗ್ರೆಸ್​​​ ಸರ್ಕಾರಕ್ಕೆ ಬಹುಮತ ಬಂದಿದೆ ಅದಕ್ಕೆ ಅವರು ಅಧಿಕಾರದಲ್ಲಿದ್ದಾರೆ. ನಾವು ವಿರೋಧ ಪಕ್ಷವಾಗಿ ಕೆಲಸ ಮಾಡೋಣ ಎಂದು ನಿರ್ಧರಿಸಿದ್ದೇವೆ. ಕಳೆದ ಬಾರಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯಬಾರದು ಎಂಬ ಕಾರಣಕ್ಕೆ ಸಿದ್ದರಾಮಯ್ಯನವರೇ ಶಾಸಕರನ್ನು ಕಳುಹಿಸಿದರು ಎಂದು ಹೇಳಿದರು.

RELATED ARTICLES

Related Articles

TRENDING ARTICLES