ಮೋಹನ್ ಕೃಷ್ಣ ಎಂಬುವರು ಮೊಹಮ್ಮದ್ ಶಮಿಯ ಡ್ರೈವಿಂಗ್ ಲೈಸೆನ್ಸ್ ಅನ್ನು ಪೋಸ್ಟ್ ಮಾಡಿದ್ದು ಶಮಿ ತನ್ನ ನಿಜ ವಯಸ್ಸನ್ನು ಮರೆಮಾಚಿದ್ದಾರೆ ಎಂದು ಆರೋಪಿಸಿದ್ದಾರೆ. ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಗಾಯದ ಕಾರಣ ಸುಮಾರು ಒಂದು ವರ್ಷದ ನಂತರ ಕ್ರಿಕೆಟ್ ಮೈದಾನಕ್ಕೆ ಮರಳಿದ್ದಾರೆ. ರಣಜಿ ಟ್ರೋಫಿ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಶಮಿ ಬಂಗಾಳದ ಗೆಲುವಿನಲ್ಲಿ ದೊಡ್ಡ ಪಾತ್ರ ವಹಿಸಿದ್ದರು.
ರಣಜಿ ಟ್ರೋಫಿಯಲ್ಲಿ ಮಧ್ಯಪ್ರದೇಶ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ನಂತರ ಮೊಹಮ್ಮದ್ ಶಮಿ ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ಎರಡನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ತಂಡವನ್ನು ಸೇರಿಸಿಕೊಳ್ಳಬಹುದು ಅಂತ ಹೇಳಲಾಗುತ್ತಿತ್ತು. ಆದರೆ ಅಷ್ಟರಲ್ಲಿ ಮೊಹಮ್ಮದ್ ಶಮಿಗೆ ಸಂಕಷ್ಟ ಎದುರಾಗಿದೆ. ಮೋಹನ್ ಕೃಷ್ಣ ಎಂಬುವರು ಮೊಹಮ್ಮದ್ ಶಮಿಯ ಡ್ರೈವಿಂಗ್ ಲೈಸೆನ್ಸ್ ಅನ್ನು ಪೋಸ್ಟ್ ಮಾಡಿದ್ದು ಶಮಿ ತನ್ನ ನಿಜ ವಯಸ್ಸನ್ನು ಮರೆಮಾಚಿದ್ದಾರೆ ಎಂದು ಆರೋಪಿಸಿದ್ದಾರೆ. ಬಿಸಿಸಿಐ ತನಿಖೆಗೆ ಆಗ್ರಹಿಸಿ ಕ್ರಮಕೈಗೊಳ್ಳಲಿ ಎಂದು ಹೇಳಿದ್ದಾರೆ . ಹೀಗಿರುವಾಗ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಶಮಿ ಆಸ್ಟ್ರೇಲಿಯಕ್ಕೆ ತೆರಳುವಂತಿಲ್ಲ ಎಂಬ ಪ್ರಶ್ನೆಗಳು ಎದ್ದಿವೆ.
ವ್ಯಕ್ತಿಯೊಬ್ಬರು ಶಮಿ ಅವರ ಡ್ರೈವಿಂಗ್ ಲೈಸೆನ್ಸ್‌ನ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅದರ ಪ್ರಕಾರ ಅವರ ವಯಸ್ಸು 42, ಆದರೆ ಶಮಿ ತಮ್ಮ ವಯಸ್ಸನ್ನು 34 ವರ್ಷಗಳು ಎಂದು ಹೇಳಿಕೊಂಡಿದ್ದಾರೆ. ಆದರೆ ಅದರಲ್ಲಿ ನೀಡಿರುವ ಫೋಟೋ ಮತ್ತು ಮಾಹಿತಿ ಸರಿಯಾಗಿದೆಯೇ ಮತ್ತು ಅದನ್ನು ಎಡಿಟ್ ಮಾಡಲಾಗಿದೆಯೇ ಅಥವಾ ಪೋಸ್ಟ್ ಮಾಡಲಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ