Monday, December 23, 2024

ಇಂದು ಬೆಂಗಳೂರಿನ ಕೆಲವು ಕಡೆ ವಿದ್ಯುತ್ ವ್ಯತ್ಯಯ

ಬೆಂಗಳೂರು : ಇಂದು ಬೆಂಗಳೂರಿನ ಕೆಲವು ಕಡೆ ವಿದ್ಯುತ್ ವ್ಯತ್ಯಯವಾಗಲಿದ್ದು. ಪುಟ್ಟೇನಹಳ್ಳಿಯ ಸಬ್‌ಸ್ಟೇಷನ್ ನಲ್ಲಿ ಕೆಪಿಟಿಸಿಎಲ್​ನ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ, ಹೆಬ್ಬಾಳ ಉಪ ವಿಭಾಗದ ಸಿ-7 ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮಾಹಿತಿ ದೊರೆತಿದೆ.

ಬೆಳಗ್ಗೆ 10:30ರಿಂದ ಮಧ್ಯಾಹ್ನ 3:30ರವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮಾಹಿತಿ ದೊರೆತಿದ್ದು ವೆಂಕಟಾಲ, ಪಾಲನಹಳ್ಳಿ, ಕಟ್ಟಿಗೇನಹಳ್ಳಿ, ಸೆಂಚುರಿ ಲೇಔಟ್, ಅನಂತಪುರ ಗೇಟ್, ಏರ್ ಫೋರ್ಸ್, ಮಾರಸಂದ್ರ, ಶ್ರೀರಾಮನಹಳ್ಳಿ, ನೆಲಕುಂಟೆ, ಹನಿಯೂರು, ಚೆಲ್ಲಹಳ್ಳಿ, ಕರ್ಲಾಪುರವೆಂಕಟಾಲ, ಪಾಲನಹಳ್ಳಿ, ಕಟ್ಟಿಗೇನಹಳ್ಳಿ, ರಾಮ್‌ಕಿ ಉತ್ತರ-1, ಮಾರುತಿ ನಗರ, ಪ್ರೆಸ್ಟೀಜ್ ನಗರ, ಮಾರುತಿ ರಾಯಲ್ ನಗರ
ಕೋಗಿಲು, ಪೂಜಾ ಮಹಾಲಕ್ಷ್ಮಿ L/O, ಸಪ್ತಗಿರಿ L/O, ಪ್ರಕೃತಿ ನಗರ, ಶ್ರೀನಿವಾಸಪುರ, ಅಯ್ಯಪ್ಪ ಎನ್‌ಕ್ಲೇವ್, SNಹಳ್ಳಿ, ಮೈಲಪನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್​ ವ್ಯತ್ಯಯವಾಗಲಿದೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES