Monday, December 23, 2024

ಕಾರ್ತಿಕ ಮಾಸ ಎಫೆಕ್ಟ್​​ : ಹೂವಿನ ಬೆಲೆ ಕೇಳಿದ್ರೆ ಶಾಕ್​ ಆಗೋದು ಗ್ಯಾರಂಟಿ

ಬೆಲೆ ಏರಿಕೆಯಿಂದಾಗಿ ಗ್ರಾಹಕರು ಮೊದಲೇ ರೋಸಿ ಹೋಗ್ತಾ ಇದ್ದಾರೆ. ಈ ಮಧ್ಯೆ ಕಾರ್ತಿಕ ಮಾಸದ ಹಿನ್ನೆಲೆ ಹೂವಿನ ಬೆಲೆ ಗಗನಕ್ಕೆ ಏರಿದ್ದು ಹೂವಿನ ಬೆಲೆ ಕೇಳಿ ಗ್ರಾಹಕರು ಶಾಕ್ ಆಗುತ್ತಿದ್ದಾರೆ. ಹಾಗಾದ್ರೆ ಯಾವೆಲ್ಲಾ ಹೂವಿನ ಬೆಲೆ ಎಷ್ಟು ಎಷ್ಟ್ಟು ಇದೆ ಎಂಬುವುದ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಕಾರ್ತಿಕ ಮಾಸದಲ್ಲಿ ಗೃಹಪ್ರವೇಶ, ಮದುವೆಗಳು, ಅಯ್ಯಪ್ಪ ಸ್ವಾಮಿಗೆ ಮಾಲೆ ಹಾಕುವವರ ಸಂಖ್ಯೆ, ಅತಿ ಹೆಚ್ಚಾಗಿ ನಡೆಯುತ್ತೆ, ಹಾಗಾಗಿ ಪ್ರತಿ ವರ್ಷ ಕಾರ್ತಿಕ ಮಾಸ ಬರುತ್ತಿದ್ದ ಹಾಗೇ ಹೂವಿನ ಬೆಲೆ ಮತ್ತು ಬೇಡಿಕೆ ಎರಡು ಕೂಡ ಹೆಚ್ಚಾಗುತ್ತೆ. ಈ ವರ್ಷ ಕೂಡ ಅತೀ ಹೆಚ್ಚಾಗಿ ಹೂವಿನ ದರದಲ್ಲಿ ಭಾರೀ ಏರಿಕೆ ಕಂಡುಬಂದಿದೆ.

ಕಾರ್ತಿಕ ಮಾಸದಲ್ಲಿ ಶುಭಕಾರ್ಯಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುವುದರಿಂದ ಈ ಸಮಯದಲ್ಲಿ ಹೂವು ಸೇರಿದಂತೆ ಕೆಲವು ವಸ್ತುಗಳ ಬೆಲೆಯಲ್ಲಿ ಹೆಚ್ಚಳವಾಗುತ್ತವೆ. ಅದೇ ರೀತಿಯಾಗಿ ಈ ಬಾರೀ ಹೂವಿನ ಬೆಲೆಯಲ್ಲಿ ಭಾರೀ ಪ್ರಮಾಣದ ಹೆಚ್ಚಳವಾಗಿದ್ದು ದಿನದಿಂದ ದಿನಕ್ಕೆ ಹೂವಿನ ಬೆಲೆಯಲ್ಲಿ ಬಾರೀ ಏರಿಕೆ ಕಂಡುಬರುತ್ತಿದೆ.. ಸಾಮಾನ್ಯ ದಿನದಲ್ಲಿ 300 ರಿಂದ 800 ರವರೆಗೆ ಇದ್ದ ಒಂದು ಕೆಜಿ ಮಲ್ಲಿಗೆ ಇದೀಗ 2000 ದಿಂದ ಎರಡುವರೆ ಸಾವಿರ ಆಗಿದೆ. 300 ರೂಪಾಯಿ ಇಂದ ಹೂವಿನ ಮಾಲೆ ಮೂರು ಸಾವಿರಕ್ಕೆ ಏರಿಕೆ ಕಂಡಿದೆ.

ಇದು ಯಾವೆಲ್ಲ ಹೂವಿನ ಬೆಲೆ ಎಷ್ಟ್ ಎಷ್ಟಿದೆ ಅಂತ ನೋಡೋದಾದ್ರೆ.

1. ಕನಕಾಂಬರ ಕೆಜಿಗೆ 2,300-2400 ರೂಪಾಯಿ

2. ಗುಂಡು ಮಲ್ಲಿಗೆ 1000- 2500 ರೂಪಾಯಿ

3. ಕಾಕಡಾ ಮಲ್ಲಿಗೆ 800-1500 ರೂಪಾಯಿ

4. ಗುಲಾಬಿ 250 – 300 ರೂಪಾಯಿ

5. ಸೇವಂತಿಗೆ 300 ರಿಂದ 400 ರೂಪಾಯಿ

6. ತಾವರೆ ಹೂಜೋಡಿ 70-80 ರೂಪಾಯಿ

7. ಹೂವಿನ ಮಾಲೆ – 300- 3000 ರೂಪಾಯಿ

ಇನ್ನು ಬೆಂಗಳೂರಿನ ಸಿಟಿ ಮಾರ್ಕೆಟ್ ನಲ್ಲಿ ಕೂಡ ಹೂವಿಗೆ ಭರ್ಜರಿ ಬೇಡಿಕೆ ಬರ್ತಾ ಇದ್ದು ಹೂವಿನ ಬೆಲೆ ಕೇಳಿ ಗ್ರಾಹಕರು ಶಾಕ್ ಆಗ್ತಿದ್ದಾರೆ. ಇನ್ನು ಎಷ್ಟೇ ಬೆಲೆ ಏರಿಕೆ ಅದ್ರು ಕೂಡ ಹೂವು ಖರೀದಿ ಮುಖ್ಯ ಏನೂ ಮಾಡೋಕ್ಕೆ ಆಗಲ್ಲ, ಆದ್ರೆ ತುಂಬಾ ಬೆಲೆ ಆಗಿದೆ ಅಂತ ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.

ಒಟ್ಟಾರೆಯಾಗಿ ಕಾರ್ತಿಕ ಮಾಸ ಪ್ರಾರಂಭವಾಗ್ತಾ ಇದ್ದ ಹಾಗೆ ಹೂವಿನ ಬೆಲೆ ಗಗನಕ್ಕೇರಿದು, ಗೃಹಪ್ರವೇಶ ಮದುವೆ ಮಾಡುವವರು ತಲೆ ಮೇಲೆ ಕೈ ಹಿಡ್ಕೊಂಡು ಇಷ್ಟೆಲ್ಲ ಬರಿ ಹೂವಿಗೆ ಖರ್ಚು ಮಾಡಬೇಕಾ ಅಂತ ಯೋಚನೆ ಮಾಡ್ತಿದ್ದಾರೆ. ಇನಾದ್ರೂ ಹೂವಿನ ಬೆಲೆ ಕಮ್ಮಿ ಆಗುತ್ತಾ ಅನ್ನೋದನ್ನು ಕಾದು ನೋಡಬೇಕಷ್ಟೆ.

RELATED ARTICLES

Related Articles

TRENDING ARTICLES