Wednesday, December 25, 2024

ಅಮಾಯಕ ವ್ಯಕ್ತಿಯ ಮೇಲೆ ಜನಪ್ರತಿನಿಧಿಯಿಂದ ಹಲ್ಲೆ

ಕಾರ್ಕಳ: ಪುರಸಭಾ ಸದಸ್ಯನೊರ್ವ ಅಮಾಯಕ ವ್ಯಕ್ತಿಯ ಮೇಲೆ ಹಲ್ಲೆ ಮಾಡಿರುವ ಘಟನೆ ಭಾನುವಾರ(ನ.17) ಕಾರ್ಕಳದಲ್ಲಿ ನಡೆದಿದ್ದು. ಮಹಾಬಲ ಎಂಬ ವ್ಯಕ್ತಿಯ ಕಾಲಿಗೆ ಗಂಭೀರ ಗಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಕಾರ್ಕಳ ಪುರಸಭೆಯ ಕಾಂಗ್ರೆಸ್ ಸದಸ್ಯ ಸೀತಾರಾಮ ಎಂಬವರು ಬಂಡೀಮಠದಲ್ಲಿನ ನಂದಿನಿ ಹಾಲಿನ ಬೂತ್ ಬಳಿಯಲ್ಲಿ ನಿಟ್ಟೆ ಗ್ರಾಮದ ಮಹಾಬಲ ಮೂಲ್ಯ ಎಂಬುವವರು ಕಳ್ಳತನ ಮಾಡಿದ್ದಾರೆ ಎಂದು ಜಗಳವಾಡಿದ್ದು. ಅಂಗಡಿಯೊಳಗಿಂದ ದೊಣ್ಣೆಯನ್ನು ತಂದು ಹಲ್ಲೆ ಮಾಡಿದ್ದಾನೆ. ಕೇವಲ ಹಲ್ಲೆ ಮಾಡದೆ ಜೀವ ಬೆದರಿಕೆಯನ್ನು ಹಾಕಿದ್ದಾನೆ ಎಂದು ಮಾಹಿತಿ ದೊರೆತಿದೆ.

ಹಲ್ಲೆಗೊಳಗಾದ ಮಹಾಬಲ ಎಂಬ ವ್ಯಕ್ತಿಯ ಕಾಲಿನ ಮೂಳೆ ಮುರಿದಿದ್ದು. ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.ಹಲ್ಲೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದ್ದು. ಜವಬ್ದಾರಿಯುತ ಸ್ಥಾನದಲ್ಲಿ ಇರಬೇಕಾದ ವ್ಯಕ್ತಿಯಿಂದ ಇಂತಹ ಕೃತ್ಯವಾಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

RELATED ARTICLES

Related Articles

TRENDING ARTICLES